Sunday, March 26, 2023

Latest Posts

ಕರಾವಳಿಯಲ್ಲಿ ದಾಖಲೆ ಬರೆದ ತಾಪಮಾನ: ಮೂಡುಬಿದಿರೆಯಲ್ಲಿ 40 ಡಿಗ್ರಿ ಉಷ್ಣಾಂಶ ದಾಖಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಬಿಸಿಲ ಝಳ ಜೋರಾಗಿತ್ತು. ವೆದರ್‌ ರಿಪೋರ್ಟ್‌ ಪ್ರಕಾರ 39-40ರಷ್ಟು ದಾಖಲಾಗಿದೆ. ಭಾರೀ ಪ್ರಮಾಣದಲ್ಲಿ ಬಿಸಿಲ ಝಳ ಏರುತ್ತಿದ್ದು ಜನತೆ ಅಕ್ಷರಶಃ ತತ್ತರಿಸಿ ಹೋಗುತ್ತಿದ್ದಾರೆ.

ಹಲವೆಡೆಗಳಲ್ಲಿ ಜಲಕ್ಷಾಮ ಉಂಟಾಗುತ್ತಿದೆ. ಹಳ್ಳ ಕೊಳ್ಳಗಳು ಬತ್ತಿಹೋಗಿವೆ. ತೋಡು, ಹೊಳೆಗಳಲ್ಲಿ ನೀರಿನ ಹರಿವು ಕ್ಷೀಣಿಸಿವೆ.
ಬಿಸಿಲ ಕಾವು ಏರುತ್ತಿದ್ದಂತೆಯೇ ಜನತೆ ಸೆಖೆ ತಡೆಯಲಾರದೆ ಮನೆಯೊಳಗೆ ಆಶಯ ಪಡೆಯುತ್ತಿದ್ದಾರೆ. ಮಧ್ಯಾಹ್ನದ ಹೊತ್ತಲ್ಲಿ ಹೊರ ಹೋಗುವುದೂ ಕಷ್ಟ ಎಂಬಂತಹ ಪರಿಸ್ಥಿತಿ ತಲೆದೋರಿದೆ.

ಮುಂಜಾನೆ ಇಬ್ಬನಿ ಬೀಳುತ್ತಿತ್ತು. ಹೊತ್ತು ಏರುತ್ತಿದ್ದಂತೆಯೇ ಬಿಸಿಲ ಝಳ ಜೋರಾಗಲಾರಂಬಿಸಿತು. ಬಿಸಿಲಿನೊಂದಿಗೆ ಬಿಸಿ ಗಾಳಿಯೂ ಜೋರಾಗಿತ್ತು. ಒಟ್ಟಿನಲ್ಲಿ ಜನತೆ ತೀವ್ರ ರೀತಿಯ ತೊಂದರೆ ಅನುಭವಿಸುವಂತಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!