ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಲಸಿಕೆ ಪಡೆಯುವವರ ವಯಸ್ಸನ್ನು 25 ವರ್ಷಗಳಿಗೆ ಇಳಿಸಿ: ಕೇಂದ್ರಕ್ಕೆ ಸೋನಿಯಾ ಗಾಂಧಿ ಸಲಹೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ರೋಗ ನಿರೋಧಕ ಲಸಿಕೆ ಪಡೆಯುವವರ ವಯಸ್ಸನ್ನು 25 ವರ್ಷಗಳಿಗೆ ಇಳಿಸುವಂತೆ ಮತ್ತು ಜನರಿಗೆ ಆದಾಯದ ನೆರವು ನೀಡುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಇಂದು ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ ನಡೆಸಿದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಸಿಎಂಗಳು ಹಾಗೂ ಇತರೆ ನಾಯಕರ ಜೊತೆಗೆ ಚರ್ಚೆ ನಡೆಸಿದರು.
ಸಭೆಯ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಎಂದಿಗೂ ಸಾಂಕ್ರಾಮಿಕವನ್ನು ದೇಶದ ಸವಾಲು ಎಂದು ಮತ್ತು ಅದು ರಾಜಕೀಯ ಪಕ್ಷಗಳಿಗಿಂತ ಪ್ರಮುಖವಾದುದೆಂದೇ ಪರಿಗಣಿಸಿದೆ. ನಾವು 2020 ರ ಫೆಬ್ರವರಿ-ಮಾರ್ಚ್ ತಿಂಗಳಿನಿಂದಲೂ ನಮ್ಮ ಸಹಕಾರವನ್ನು ನೀಡುತ್ತಲೇ ಬಂದಿದ್ದೇವೆ. ದೇಶದ ಮೇಲೆ ಕೊರೋನಾದ ಎರಡನೇ ಅಲೆ ಪರಿಣಾಮಕಾರಿಯಾಗಿ ದಾಳಿ ಮಾಡಿದೆ ಎಂಬ ವಿಚಾರವನ್ನ ಕಡೆಗಣಿಸಲಾಗುವುದಿಲ್ಲ. ಒಂದಿಡೀ ವರ್ಷ ನಮಗೆ ತಯಾರಿ ಮಾಡಿಕೊಳ್ಳಲು ಕಾಲಾವಕಾಶವಿದ್ದರೂ ನಾವು ಅಸುರಕ್ಷಿತರಾಗಿ ಸಿಕ್ಕಿಬಿದ್ದಿದ್ದೇವೆ.ವಿಪಕ್ಷಗಳ ರಚನಾತ್ಮಕ ಸಲಹೆಗಳನ್ನು ಕೇಳಿಸಿಕೊಳ್ಳುವ ಬದಲು ಕೇಂದ್ರದ ಸಚಿವರುಗಳು ವಿಪಕ್ಷಗಳ ನಾಯಕರು ಸಲಹೆಗಳನ್ನು ನೀಡಿದ್ದಕ್ಕೆ ಅವರ ಮೇಲೆ ವಾಗ್ದಾಳಿಗಳನ್ನು ನಡೆಸಿದರು. ನಾನು ನೀನು ಎನ್ನುವ ಈ ಪುನರಾವರ್ತನೆ ಬಾಲಿಶವಾದದ್ದು ಮತ್ತು ಅನವಶ್ಯಕವಾದದ್ದು ಎಂದರು.
ಕೇಂದ್ರ ಸರ್ಕಾರ ವ್ಯಾಕ್ಸಿನ್ ಅಭ್ಯರ್ಥಿಗಳ ಆದ್ಯತೆಯ ವಯಸ್ಸನ್ನು ಕೇಂದ್ರ ಸರ್ಕಾರ 25 ವರ್ಷಕ್ಕೆ ಇಳಿಸಬೇಕಿದೆ. ಬಹುತೇಕ ಯುವ ಸಮುದಾಯವೂ ಸಹ ಅಸ್ತಮಾ, ಅಂಜಿನಾ, ಡಯಾಬಿಟೀಸ್, ಕಿಡ್ನಿ ಮತ್ತು ಲಿವರ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.ಅರ್ಹರಿಗೆ 6,000 ಹಣವನ್ನು ಅವರ ಅಕೌಂಟ್​ಗಳಿಗೆ ಜಮೆ ಮಾಡಬೇಕು.
ಕೋವಿಡ್ 19ಗೆ ಸಂಬಂಧಿಸಿದ ಎಲ್ಲಾ ಉಪಕರಣಗಳು, ಔಷಧಿಗಳನ್ನ ಜಿಎಸ್​ಟಿಯಿಂದ ಹೊರಗಿಡಬೇಕು. ರೆಮ್ಡಿಸಿವಿರ್ ಮತ್ತು ಆಕ್ಸಿಜನ್ ಈ ಸಮಯದಲ್ಲಿ ಅತ್ಯಗತ್ಯ ಜೀವರಕ್ಷಕಗಳಾಗಿವೆ. ಇವು ಮತ್ತು ಇತರೆ ಅತ್ಯವಶ್ಯಕ ವಸ್ತುಗಳ ಮೇಲೆ 12 ಪರ್ಸೆಂಟ್ ಜಿಎಸ್​ಟಿ ವಿಧಿಸಲಾಗಿದೆ. ಇನ್ನು ಹಲವು ರಾಜ್ಯಗಳು ಈಗಾಗಲೇ ಅರೆ ಲಾಕ್​ಡೌನ್, ಕರ್ಫ್ಯೂನಂಥ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಇದರಿಂದ ಬಡವರು ಮತ್ತು ದಿನಗೂಲಿ ಕೆಲಸಗಾರರ ಆರ್ಥಿಕ ಸ್ಥಿತಿ ಹದಗೆಡಲಿದ್ದು ಅರ್ಹರಿಗೆ 6,000 ಹಣವನ್ನು ಅವರ ಅಕೌಂಟ್​ಗಳಿಗೆ ಜಮೆ ಮಾಡಬೇಕೆಂದು ಸೋನಿಯಾ ಗಾಂಧಿ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss