ಹಣದುಬ್ಬರ ಕಡಿಮೆಯಾಗಿಸೋದು ಕೇವಲ ಕೇಂದ್ರದ ಕೆಲಸವಲ್ಲ, ರಾಜ್ಯಗಳದ್ದೂ ಜವಾಬ್ದಾರಿ- ವಿತ್ತ ಸಚಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಣದುಬ್ಬರವನ್ನು ತಗ್ಗಿಸುವುದು ಕೇಂದ್ರ ಸರ್ಕಾರದ್ದೊಂದೇ ಜವಾಬ್ದಾರಿಯಾಗಿರುವುದಿಲ್ಲ, ಬೆಲೆಗಳ ನಿರ್ವಹಣೆಯಲ್ಲಿ ರಾಜ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ICRIER ಆಯೋಜಿಸಿದ್ದ ಹಣದುಬ್ಬರವನ್ನು ನಿಯಂತ್ರಿಸುವ ಕುರಿತು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ “ಹಣದುಬ್ಬರ ನಿರ್ವಹಣೆಯನ್ನು ಕೇಂದ್ರ ಮತ್ತು ರಾಜ್ಯಗಳೆರಡರ ಸಾಮೂಹಿಕ ಜವಾಬ್ದಾರಿ” ಎಂದಿದ್ದಾರೆ. ಅಲ್ಲದೇ ವಿಸೇಷವಾಗಿ ಇಂಧನ ಬೆಲಗಳನ್ನು ಉಲ್ಲೇಖಿಸಿದ ಅವರು “ಕೇಂದ್ರವು ಎರಡು ಬಾರಿ ಇಂಧನದ ಮೇಲಿನ ತೆರಿಗೆಯನ್ನು ಇಳಿಸಿ ಆ ಮೂಲಕ ಬೆಲೆಗಳನ್ನು ಕಡಿಮೆ ಮಾಡಿದೆ ಆದರೆ ಅದನ್ನು ಅನುಸರಿಸುವ ಜವಾಬ್ದಾರಿ ರಾಜ್ಯಗಳ ಮೇಲಿದೆ. ಕೆಲವು ರಾಜ್ಯಗಳಲ್ಲಿ ಹಣದುಬ್ಬರ ಮಟ್ಟವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿರುವುದು ಕಳವಳಕ್ಕೆ ಕಾರಣವಾಗಿದೆ. ಆ ರಾಜ್ಯಗಳು ಇಂಧನ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿಲ್ಲ, ಇದು ಹಣದುಬ್ಬರವನ್ನು ಹೆಚ್ಚಿಸುತ್ತದೆ” ಎಂದು ಉಲ್ಲೇಖಿಸಿದ್ದಾರೆ.

“ಬೆಲೆ ಏರಿಕೆಯಿಂದ ಬಳಲುತ್ತಿರುವಜನರಿಗೆ ಪರಿಹಾರವನ್ನು ನೀಡಲು ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಉತ್ಪಾದಕರ ಹಿತಾಸಕ್ತಿಗಳ ನಡುವೆ ಸರಿಯಾದ ಸಮತೋಲನವನ್ನು ಖಚಿತಪಡಿಸಿಕೊಳ್ಳಲು ಉಕ್ಕಿನಂತಹ ನಿರ್ಣಾಯಕ ಕಚ್ಚಾ ವಸ್ತುಗಳ ಮೇಲೆ ಸರ್ಕಾರವು ರಫ್ತು ಸುಂಕವನ್ನು ಪರಿಚಯಿಸಲಾಗಿದೆ. ಜಾಗತೀಕರಣದಿಂದಾಗಿ ಹಣದುಬ್ಬರದ ಪ್ರಭಾವ ಹರಡುತ್ತದೆ ಮತ್ತು ಜಾಗತಿಕವಾಗಿ ಕೇಂದ್ರೀಯ ಬ್ಯಾಂಕ್‌ಗಳು ಅದನ್ನು ಪಳಗಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ. ರಷ್ಯಾದಿಂದ ಅಗ್ಗದ ತೈಲ ಖರಿದಿಸುವುದೂ ಕೂಡ ಈ ಕಾರ್ಯತಂತ್ರದ ಭಾಗವಾಗಿದೆ” ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!