ಶಿವಮೊಗ್ಗ ಜಾತ್ರಾ ಮಹೋತ್ಸವದಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ನಿರಾಕರಣೆ

ಹೊಸದಿಗಂತ ವರದಿ, ಶಿವಮೊಗ್ಗ:

ನಗರದ ಮಾರಿಕಾಂಬಾ ಜಾತ್ರೆ ಬಳಿಕ ಇದೀಗ ಸಮೀಪದ ಮಲವಗೊಪ್ಪದಲ್ಲಿನ ಜಾತ್ರಾ ಮಹೋತ್ಸವದ ಬಳಿಯೂ ಅನ್ಯ ಧರ್ಮೀಯರಿಗೆ ಅಂಗಡಿ-ಮುಂಗಟ್ಟು ಇಡಲು ಸ್ಥಳೀಯರು ಅವಕಾಶ ನಿರಾಕರಿಸಿರುವ ಘಟನೆ ನಡೆದಿದೆ.
ಸಮೀಪದ ಮಲವಗೊಪ್ಪದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಚನ್ನಬಸವೇಶ್ವರ ದೇವಸ್ಥಾನವಿದೆ. ಪ್ರತಿ ವರ್ಷ ಇದರ ರಥೋತ್ಸವ ನಡೆಯುತ್ತದೆ. ಈ ಬಾರಿ ಕೂಡ ಶುಕ್ರವಾರ ರಥೋತ್ಸವ ನಿಗದಿಯಾಗಿದ್ದು, ಶುಕ್ರವಾರ ರಾತ್ರಿ ರಥೋತ್ಸವ ನಡೆಯಿತು.
ರಥೋತ್ಸವ ವೇಳೆ ಸ್ಥಳೀಯ ಕೆಲವು ಅನ್ಯ ಧರ್ಮೀಯರು ಪ್ರತಿ ವರ್ಷ ಅಂಗಡಿಗಳನ್ನು ಹಾಕುತ್ತಿದ್ದರು. ಅದರಂತೆ ಶುಕ್ರವಾರ ಅಂಗಡಿಗಳನ್ನು ಹಾಕಲು ಬಂದಾಗ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅಂಗಡಿ ಹಾಕದೇ ವಾಪಾಸಾಗಿದ್ದಾರೆ.
ರಾತ್ರಿ ರಥೋತ್ಸವ..
ಚನ್ನಬಸವೇಶ್ವರ ಸ್ವಾಮಿ ರಥೋತ್ಸವ ರಾತ್ರಿ ವೇಳೆ ಅದ್ಧೂರಿಯಾಗಿ ನಡೆಯುತ್ತದೆ. ಈ ವೇಳೆ ಅಕ್ಕಪಕ್ಕದ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ದೇಗುಲದ ಬಾಗಿಲ ಎದುರಿನ ಸ್ಥಳದಲ್ಲಿ ತೇರನ್ನು ಎಳೆಯುವುದು ರೂಢಿಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!