ಪ್ರಾದೇಶಿಕ ಪಕ್ಷಗಳು ಒಗ್ಗೂಡುವುದು ಅನಿವಾರ್ಯ: ತೃತಿಯ ರಂಗ ರಚನೆ ಬಗ್ಗೆ ಎಚ್ಡಿಕೆ ಸುಳಿವು

ಹೊಸದಿಗಂತ ವರದಿ, ಕಲಬುರಗಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಅವಧಿಯಲ್ಲಿ ಕೇರಳದವರು ಬಂದು ದುಡ್ಡು ತೆಗೆದುಕೊಂಡು ಹೋಗುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬುಧವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇರಳದವರು ತೆಗೆದುಕೊಂಡು ಹೋಗುತ್ತಿದ್ದ ಆ ದುಡ್ಡನ್ನು ಮೈಸೂರಿನ ಹುಣುಸೂರಿನ ಹತ್ತಿರ ಪೋಲಿಸ್ ಇಲಾಖೆಯಿಂದ ದರೋಡೆ ಮಾಡಲಾಗಿತ್ತು. ಈ ವಿಷಯವನ್ನು ನಾನು ವಿಧಾನ ಸಭೆಯ ಅಧಿವೇಶನ ವೇಳೆ ಚಚೆ೯ ಮಾಡಿದ್ದೇನೆ ಎಂದರು.
ಕೆ.ಜೆ.ಜಾಜ್೯ ಅವರು ಗೃಹ ಸಚಿವರಿದ್ದಾಗ ಅವರ ಹತ್ತಿರ ದೂರು ಹೋಗಿದೆ. ಕೊನೆಗೆ ಆ ದುಡ್ಡು ಕಳೆದುಕೊಂಡವರಿಗೆ ಹಣ ಒದಗಿಸುವುದಕ್ಕೆ ಆಗಲಿಲ್ಲ ಎಂದ ಅವರು, ಈಗಿನ ವ್ಯವಸ್ಥೆ ಸರಿ ಪಡಿಸುವುದು ಹೇಗೆ ಎಂದು ಜನ ತೀಮಾ೯ನ ಮಾಡಬೇಕು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಉಗ್ರರ ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಗುಪ್ತಚರ ಇಲಾಖೆ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಬೇಕಾಗಿದೆ. ಇಂತಹ ಘಟನೆಗಳು ನಮ್ಮ ರಾಜ್ಯಕ್ಕೆ ಒಳ್ಳೆಯದಲ್ಲ. ಈ ರೀತಿ ನಡೆಯುವ ಘಟನೆಗಳನ್ನು ಮಟ್ಟ ಹಾಕಬೇಕು ಎಂದರು.
ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್.ಭೇಟಿ ವಿಚಾರವಾಗಿ ಮಾತನಾಡಿದ ಅವರು, ರಾಷ್ಟ್ರದ ರಾಜಕೀಯ ಬೆಳವಣಿಗೆ ಬಗ್ಗೆ ಚಚೆ೯ ನಡೆಸಲಾಗಿದೆ. ಒಂದು ಪಯಾ೯ಯ ವ್ಯವಸ್ಥೆ ತರಬೇಕೆಂಬ ಎಂಬ ಚಿಂತನೆ ನಡೆದಿದೆ ಎಂದರು.
ಥಡ್೯ಫ್ರಂಟ್ ಗಳೆಲ್ಲವೂ ಹಿಂದೆ ಆಗಿ ಹೋಗಿದ್ದು,ಆ ರೀತಿ ಎನೂ ಇಲ್ಲ ಎಂದು ಹೇಳಿದರು. ಆದರೆ, ಕೆಸಿಆರ್ ಅವರ ಚಿಂತನೆ ಬೇರೆ ಇದೆ. ಪರ್ಯಾಯ ವ್ಯವಸ್ಥೆ ತರಬೇಕಾದ ಸಮಸ್ಯೆಗಳ ಆಧಾರದ ಮೇಲೆ ಚಿಂತನೆ ಮಾಡುತ್ತಿದ್ದಾರೆ. ರೈತರ ಸಮಸ್ಯೆ, ನಿರುದ್ಯೋಗ ಸಂಬಂಧಿಸಿದಂತೆ ಪಯಾ೯ಯ ವ್ಯವಸ್ಥೆ ತರುವ ಚಿಂತನೆ ಅವರದ್ದಾಗಿದೆ ಎಂದರು.
ಸದ್ಯದ ಪರಿಸ್ಥಿತಿ ನೋಡಿದಾಗ ಪ್ರಾದೇಶಿಕ ಪಕ್ಷಗಳು ಒಗ್ಗೂಡುವುದು ಅನಿವಾರ್ಯವಾಗಿದೆ. ಇನ್ನೂ ನಿತೀಶ್ ಕುಮಾರ್ ಜೊತೆಗೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ದೇಶದಲ್ಲಿ ನಡೆಯುವ ಬೆಳವಣಿಗೆ ಬಗ್ಗೆ ಧ್ವನಿ ಎತ್ತಿದವರಿಗೆ ನಮ್ಮ ಬೆಂಬಲ ಇದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!