Sunday, August 14, 2022

Latest Posts

ಲಸಿಕೆ ಪಡೆಯಲು ನೋಂದಣಿ ಅಗತ್ಯವಿಲ್ಲ, ನೇರವಾಗಿ ಕ್ಯಾಂಪ್‌ಗೆ ಹಾಜರಾಗಿ: ವೈದ್ಯಾಧಿಕಾರಿ

ಹೊಸದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ 60 ವರ್ಷಕ್ಕಿಂತ ಅ*ಕ ವಯೋಮಾನದ ಹಿರಿಯ ಪ್ರಜೆಗಳು, 45 ವರ್ಷ ಮತ್ತು 59 ವರ್ಷ ಪ್ರಾಯದ ನಡುವಿನ ಗಂಭೀರ ರೋಗಿಗಳಿಗೆ ವ್ಯಾಕ್ಸಿನ್ ನೀಡಿಕೆ ಸಂಬಂಧ ಕ್ಯಾಂಪೇನ್ ಆರಂಭಿಸಲಾಗಿದೆ.
45 ರಿಂದ 59 ವರ್ಷದ ನಡುವಿನ ವಯೋಮಾನದ ಗಂಭೀರ ರೋಗಿಗಳಿಗೆ ಆಯಾ ಸಂಬಂಧಪಟ್ಟ ವೈದ್ಯಾಧಿಕಾರಿ ದೃಢೀಕರಿಸಿದ ನಿಗದಿತ ದೃಢೀಕರಣ ಪತ್ರ ಸಹಿತ ವ್ಯಾಕ್ಸಿನೇಷನ್‌ಗಾಗಿ ಆಗಮಿಸಬೇಕಾಗಿದೆ. ಹಿರಿಯ ನಾಗರಿಕರು, ಗಂಭೀರ ರೋಗಿಗಳು ಮೊದಲಾದವರಿಗೆ ಯಾವುದೇ ರೀತಿಯ ನೋಂದಣಿ ಅಗತ್ಯವಿಲ್ಲ. ನೇರವಾಗಿ ಕ್ಯಾಂಪ್‌ಗೆ ಹಾಜರಾಗಿ ವ್ಯಾಕ್ಸಿನೇಷನ್ ಪಡೆಯಬಹುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಕಾಸರಗೋಡು ನಗರಸಭಾ ವ್ಯಾಪ್ತಿಯ ಫಿಶರೀಸ್ ಆಫೀಸ್ ಕಸಬಾ ಕರಾವಳಿ, ನಗರಸಭಾ ಪುರಭವನ ಇತ್ಯಾದಿ ಕಡೆಗಳಲ್ಲಿ ಹಾಗೂ ಕಾಞಂಗಾಡು ನಗರಸಭಾ ವ್ಯಾಪ್ತಿಯ ಪಡನ್ನಕ್ಕಾಡು ಜಿಲ್ಲಾ ಆಯುರ್ವೇದ ಆಸ*ತ್ರೆ, ಕುಶಾಲನಗರ ನಿತ್ಯಾನಂದ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಮಾ.16, 18, 19, 20, 22 ದಿನಾಂಕಗಳಲ್ಲಿ ಮೆಗಾ ವ್ಯಾಕ್ಸಿನೇಷನ್ ಕ್ಯಾಂಪೇನ್ ನಡೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೆ ವ್ಯಾಕ್ಸಿನೇಷನ್ ಜರಗಲಿದೆ ಎಂದವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss