ಬಿಬಿಎಂಪಿ ಮಾರ್ಗಸೂಚಿ ಬೆನ್ನಲ್ಲೇ ಬೆಂಗಳೂರಿನಲ್ಲಿ 2000 ಪಿಜಿಗಳು ನೋಂದಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಗರದಲ್ಲಿ ನೋಂದಣಿಯಾಗದ ಪೇಯಿಂಗ್ ಗೆಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದ್ದೇ ತಡ ಇದೀಗ 2000 ಪಿಜಿಗಳು ನೋಂದಣಿಯಾಗಿವೆ.

ಕೋರಮಂಗಲದ ವಸತಿ ಗೃಹದಲ್ಲಿ ಯುವತಿ ಬರ್ಬರ ಹತ್ಯೆ ಘಟನೆ ಬೆನ್ನಲ್ಲೇ ಇತ್ತೀಚೆಗಷ್ಟೇ ಪಾಲಿಕೆ ನಗರ ವ್ಯಾಪ್ತಿಯ‘ಪೇಯಿಂಗ್‌ ಗೆಸ್ಟ್‌’ ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು.

ಮಾರ್ಗಸೂಚಿ ಬೆನ್ನಲ್ಲೇ ಇದೀಗ ಪಾಲಿಕೆ ಅಧಿಕಾರಿಗಳು ಪಿಜಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿದ್ದು, ಮಾರ್ಗಸೂಚಿ ಅನುಸರಿಲದ ಪಿಜಿಗಳ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ವಿಶೇಷ ಆಯುಕ್ತ ಸೂರಳ್ಕರ್ ರ್ ವಿಕಾಸ್ ಕಿಶೋರ್ ಮಾತನಾಡಿ, ಮಾರ್ಗೂಸೂಚಿಯಲ್ಲಿ ಹಲವು ಅಂಶಗಳನ್ನು ತಿಳಿಸಲಾಗಿದೆ. ಈ ಪೈಕಿ ನಿಗದಿತ ಸಂಖ್ಯೆಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಬೇಕು.

ಹೆಚ್ಚುವರಿಯಾಗಿರುವವರಿಗೆ ಹೊಸ ಸೌಲಭ್ಯಗಳ ಕಲ್ಪಿಸಬೇಕೆಂದು ತಿಳಿಸಲಾಗಿದೆ. ಮಾರ್ಗಸೂಚಿ ಅನುಸರಣೆಗೆ ಸೆಪ್ಟೆಂಬರ್ 15ರವರೆಗೆ ಗಡುವು ನೀಡಲಾಗಿದ್ದು, ನಂತರ ಕ್ರಮಕ್ಕೆ ಮುಂದಾಗಲಾಗುವುದು ಎಂದು ಹೇಳಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!