ಇನ್ನು ಮುಂದೆ ಈ ರಾಜ್ಯದಲ್ಲಿ ಸಾಕು ನಾಯಿಗಳ ನೋಂದಣಿ ಕಡ್ಡಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚಿನ ದಿನಗಳಲ್ಲಿ ನಾಯಿ ಕಚ್ಚುವಿಕೆ, ನಾಯಿ ದಾಳಿಗಳಂತಹ ಘಟನೆಗಳು ಹೆಚ್ಚಾಗುತ್ತಿರುವುದರ ನಡುವೆ ಹರಿಯಾಣ ಸರ್ಕಾರವು ರಾಜ್ಯದಲ್ಲಿ ಸಾಕು ನಾಯಿಗಳ ನೋಂದಣಿಯನ್ನು ಕಡ್ಡಾಯಗೊಳಿಸಿದೆ.

ಸಾಕು ಪ್ರಾಣಗಳ ಮಾಲೀಕರು ಸರಳ ಪೋರ್ಟಲ್‌ ನಲ್ಲಿ ಕಡ್ಡಾಯವಾಗಿ ನೋಂದಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದ್ದು ಪರವಾನಗಿಯಿಲ್ಲದೇ ನಾಯಿಯನ್ನು ಸಾಕಲು ಯಾವುದೇ ವ್ಯಕ್ತಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಸರ್ಕಾರ ಹೇಳಿರುವುದಾಗಿ ಮೂಲಗಳ ವರದಿ ಉಲ್ಲೇಖಿಸಿವೆ.

ನಿಯಮ ಉಲ್ಲಂಘಿಸಿರುವುದು ಕಂಡು ಬಂದರೆ 5,000 ರೂ. ದಂಡ ಮತ್ತು ಉಲ್ಲಂಘನೆಗಾಗಿ ಜೈಲು ಶಿಕ್ಷೆ ವಿಧಿಸುವ ನಿಬಂಧನೆಯನ್ನು ಪರಿಚಯಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ಎನ್ನಲಾಗಿದೆ.

ಹೊಸ ನಿಯಮಗಳು ಮಾಲೀಕರಿಗೆ ಕೇವಲ ಒಂದು ನಾಯಿಯನ್ನು ಸಾಕಲು ಅನುಮತಿಸಲಾಗುವುದು ಎಂದು ಹೇಳುತ್ತದೆ. ಇದಲ್ಲದೆ, ಮಾಲೀಕರು ನಾಯಿಯ ಬಾಯಿಗೆ ಮುಖವಾಡವನ್ನು ಹಾಕಬೇಕು ಎಂಬಿತ್ಯಾದಿ ನಿಯಮಗಳ ಜಾರಿಗೆ ಚಿಂತಿಸಲಾಗುತ್ತಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!