ಆಸ್ಟ್ರೇಲಿಯಾ ಜತೆಗಿನ ಬಾಂಧವ್ಯ ಮುಂದಿನ ಹಂತಕ್ಕೆ : ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿವಿಧ ಕ್ಷೇತ್ರಗಳಲ್ಲಿ ಆಸ್ಟ್ರೇಲಿಯಾ ಜೊತೆಗಿನ ಬಾಂಧವ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಉದ್ದೇಶ ನಮ್ಮದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಆರು ದಿನಗಳ ವಿದೇಶಿ ಪ್ರವಾಸದಲ್ಲಿದ್ದು, ಆಸ್ಟ್ರೇಲಿಯಾದ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ.

ರಕ್ಷಣೆ, ಭದ್ರತೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಭಾರತ-ಆಸ್ಟ್ರೇಲಿಯಾ ಬಾಂಧವ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಿದೆ ಎಂದಿದ್ದಾರೆ.

ಇಂಡೋ ಫೆಸಿಫಿಕ್ ಪ್ರದೇಶಕ್ಕೆ ಸಂಬಂಧಿಸಿದ ಸವಾಲುಗಳು, ಭಯೋತ್ಪಾದನೆ, ಸಂವಹನದ ಸಮುದ್ರ ಮಾರ್ಗಗಳ ಭದ್ರತೆ ಹಾಗೂ ಕಡಲ್ಗಳ್ಳತನದಂತಹ ಸಮಸ್ಯೆಗಳನ್ನು ಎದುರಿಸಬೇಕಿದೆ. ಈ ಎಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಪರಸ್ಪರ ಸಹಕಾರ ಮುಖ್ಯ ಎನ್ನುವುದು ಭಾರತದ ಅಭಿಪ್ರಾಯ ಎಂದಿದ್ದಾರೆ.

ನಾನು ಸುಲಭವಾಗಿ ತೃಪ್ತನಾಗುವ ವ್ಯಕ್ತಿ ಅಲ್ಲ, ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್ ಆಂಟನಿ ಕೂಡ ಅಂಥದ್ದೇ ವ್ಯಕ್ತಿ ಎಂದು ಭಾವಿಸಿದ್ದೇನೆ, ಒಗ್ಗಟ್ಟಿನಿಂದ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಬೇಕಿದೆ ಎಂದಿದ್ದಾರೆ.

ಉಭಯ ದೇಶಗಳ ನಡುವೆ ರಕ್ಷಣಾ ಸಹಭಾಗಿತ್ವ ಹೆಚ್ಚಿದೆ, ಹಾಗಾಗಿ ಭದ್ರತಾ ಕ್ಷೇತ್ರದ ಬಾಂಧವ್ಯವನ್ನು ಹೆಚ್ಚಿಸುವ ಸಮಯ ಬಂದಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!