ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ತಮ್ಮ ವರ್ಷಗಳ ರಿಲೇಷನ್‌ಶಿಪ್‌ನ್ನು ಎಂಡ್ ಮಾಡಿದ್ದಾರೆ. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಲವ್‌ಸ್ಟೋರಿಯನ್ನು ಒಪ್ಪಿಕೊಂಡಿದ್ದರು. ಇದೀಗ ವಿಜಯ್ ಒಟ್ಟಾರೆ ರಿಲೇಷನ್‌ಶಿಪ್ ಬಗ್ಗೆ ಮಾತನಾಡಿದ್ದಾರೆ.
ರಿಲೇಷನ್‌ಶಿಪ್‌ಗಳೆಲ್ಲ ಐಸ್‌ಕ್ರೀಂ ಇದ್ದಂತೆ, ಅವು ಕರಗುವ ಮುನ್ನ ಅದನ್ನು ಆಸ್ವಾದಿಸಬೇಕಷ್ಟೆ ಎಂದು ಹೇಳಿಕೊಂಡಿದ್ದಾರೆ. ನೆಟ್ಟಿಗರು ಇದಕ್ಕೆ ಎರಡು ಅರ್ಥ ನೀಡಿದ್ದಾರೆ. ಯಾವುದೇ ಸಂಬಂಧ ಆಗಲಿ ಅದು ಇರುವವರೆಗೂ ಅದರ ಸುಂದರ ಕ್ಷಣಗಳಲ್ಲಿ ಜೀವಿಸಬೇಕು ಎಂದರ್ಥ, ಇನ್ನೊಂದು ಅರ್ಥ ಎಂದರೆ ಸಂಬಂಧಗಳೆಲ್ಲ ಕ್ಷಣಿಕ ಬೇಗ ಹಾಳಾಗಿ ಹೋಗುತ್ತವೆ ಎಂದು ವಿಜಯ್ ಹೇಳ್ತಿದ್ದಾರಾ ಎಂದಿದ್ದಾರೆ.
ತಮನ್ನಾಗೆ ಮದುವೆ ಮಕ್ಕಳು ಫ್ಯಾಮಿಲಿ ರೀತಿ ಸೆಟಲ್ ಆಗೋಕೆ ಇಷ್ಟವಿತ್ತಂತೆ. ಆದರೆ ವಿಜಯ್ ಇನ್ನೂ ಫೀಲ್ಡ್‌ನಲ್ಲಿ ಸ್ಟ್ರಗಲ್ ಮೋಡ್‌ನಲ್ಲಿದ್ದು ಸೆಟಲ್ ಆಗೋದಕ್ಕೆ ರೆಡಿ ಇರಲಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಜೋಡಿ ಬ್ರೇಕಪ್ ಮಾಡಿಕೊಂಡಿದೆ.