Thursday, June 30, 2022

Latest Posts

ಕೊರೋನಾ ಸಂಕಷ್ಟದಲ್ಲಿ ಮಿಡಿದ ರಿಲಯನ್ಸ್‌ ಫೌಂಡೇಷನ್‌: 1000 ಬೆಡ್‌ಗಳ ಕೋವಿಡ್‌ ಕೇರ್‌ ಕೇಂದ್ರ ಸ್ಥಾಪನೆ, ಉಚಿತ ಚಿಕಿತ್ಸೆ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸಂಕಷ್ಟ ಕಾಲದಲ್ಲಿ ಉದ್ಯಮಿ ನೀತಾ ಅಂಬಾನಿ ನೇತೃತ್ವದ ರಿಲಯನ್ಸ್‌ ಫೌಂಡೇಷನ್‌ ದೇಶದಾದ್ಯಂತ ಅಗತ್ಯ ವೈದ್ಯಕೀಯ ಸೌಕರ್ಯ ನೀಡುವ ಮೂಲಕ ಮಿಡಿಯುತ್ತಿದೆ.
ಗುಜರಾತ್‌ನ ಜಾಮ್‌ನಗರದಲ್ಲಿ 1000 ಬೆಡ್‌ಗಳ ಕೋವಿಡ್‌ ಕೇರ್‌ ಕೇಂದ್ರ ಸ್ಥಾಪಿಸಲು ಮುಂದಾಗಿರುವ ರಿಲಯನ್ಸ್‌ ಫೌಂಡೇಷನ್‌, ಎರಡು ಹಂತದಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಲಿದೆ. ಮೊದಲಿಗೆ ಆಮ್ಲಜನಕ ಪೂರೈಕೆ ಇರುವ 400 ಹಾಸಿಗೆಗಳ ಕೋವಿಡ್‌ ಕೇರ್‌ ಕೇಂದ್ರ ಇನ್ನೊಂದು ವಾರದಲ್ಲಿ ಸೇವೆಗೆ ಸಜ್ಜಾಗಲಿದೆ. ಇದನ್ನು ಜಾಮ್‌ನಗರದ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ವಹಿಸಲಿದೆ. ನಂತರ ಇನ್ನೆರಡು ವಾರಗಳಲ್ಲಿ ಜಾಮ್‌ನಗರದ ಮತ್ತೊಂದು ಪ್ರದೇಶದಲ್ಲಿ 600 ಹಾಸಿಗೆಗಳ ಕೋವಿಡ್‌ ಕೇರ್‌ ಕೇಂದ್ರ ಸ್ಥಾಪನೆಗೊಳ್ಳಲಿದೆ.
ಈ ಕೇಂದ್ರಗಳಿಗೆ ಅಗತ್ಯವಿರುವ ಮಾನವಸಂಪನ್ಮೂಲ, ವೈದ್ಯಕೀಯ ಬೆಂಬಲ, ಉಪಕರಣ ಹಾಗೂ ಇತರ ವಸ್ತುಗಳನ್ನು ರಿಲಯನ್ಸ್‌ ಸಂಸ್ಥೆಯೇ ಪೂರೈಸಲಿದ್ದು, ಸೋಂಕಿತರೆಲ್ಲರಿಗೂ ಉಚಿತ ಚಿಕಿತ್ಸೆ ನೀಡಲಾಗುವುದು. ಇನ್ನು ಅಗತ್ಯವಿರುವ ವೈದ್ಯ ಹಾಗೂ ಶುಶ್ರೂಷಾ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ನೋಡಿಕೊಳ್ಳಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss