Sunday, December 10, 2023

Latest Posts

ಹೈದರಾಬಾದ್‌ನಲ್ಲಿ ತಲೆಯೆತ್ತಿದೆ ರಿಲಯನ್ಸ್ ರಿಟೇಲ್‌ನ ಮೊದಲ ‘ಸ್ವದೇಶ್’ ಮಳಿಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದ ಕುಶಲಕರ್ಮಿಗಳು ಹಾಗೂ ಕಲಾವಿದರಿಗೆ ಸಹಾಯ ಮಾಡಲು ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ‘ಸ್ವದೇಶ್’ ಮಳಿಗೆಯನ್ನು ತೆರೆದಿದೆ. ತೆಲಂಗಾಣದ ಹೈದರಾಬಾದ್‌ನಲ್ಲಿ ರಿಲಯನ್ಸ್ ಫೌಂಡೇಶನ್‌ನ ಅಧ್ಯಕ್ಷೆ ನೀತಾ ಅಂಬಾನಿಯವರು ನಿನ್ನೆ ಮಳಿಗೆಯನ್ನು ಉದ್ಘಾಟಿಸಿದರು. ಈ ಮಳಿಗೆಯ ಮೂಲಕ ರಿಲಯನ್ಸ್ ದೇಶದ ಪುರಾತನ ಕರಕುಶಲ ವಸ್ತುಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಪ್ರಬಲ ವೇದಿಕೆ ಕಲ್ಪಿಸಲು ಪ್ರಯತ್ನಿಸುತ್ತಿದೆ. ರಿಲಯನ್ಸ್ ಒಡೆತನದ ಈ ಸ್ಥಳೀಯ ಅಂಗಡಿ ಸಾಂಪ್ರದಾಯಿಕ ಕುಶಲಕರ್ಮಿಗಳ ವಸ್ತುಗಳನ್ನು ಮಾರಾಟ ಮಾಡುತ್ತದೆ.

‘ಸ್ವದೇಶಿ’ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನೀತಾ ಅಂಬಾನಿ, ಸ್ವದೇಶಿ ಸ್ಟೋರ್ ಮೂಲಕ ಭಾರತೀಯ ಕಲೆಗಳನ್ನು ಉತ್ತೇಜಿಸಲು ರಿಲಯನ್ಸ್ ಪ್ರಯತ್ನಿಸುತ್ತಿದೆ. ಈ ಮೂಲಕ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೂ ಉತ್ತೇಜನ ನೀಡಲಾಗುವುದು. ಈ ಮಳಿಗೆಯ ನೆರವಿನಿಂದ ದೇಶದ ಲಕ್ಷಾಂತರ ಕುಶಲಕರ್ಮಿಗಳಿಗೆ ವೇದಿಕೆ ಕಲ್ಪಿಸಲಾಗುವುದು. ಇದರಿಂದಾಗಿ ಕುಶಲಕರ್ಮಿಗಳು ಉತ್ತಮ ಆದಾಯದ ಅವಕಾಶಗಳನ್ನು ಪಡೆಯುವುದರ ಜೊತೆಗೆ ಭಾರತೀಯ ಕುಶಲಕರ್ಮಿಗಳಿಗೆ ಮನ್ನಣೆ ನೀಡಲು ಅಮೆರಿಕ ಮತ್ತು ಯುರೋಪ್‌ನಲ್ಲಿ ಈ ಮಳಿಗೆಯನ್ನು ವಿಸ್ತರಿಸುವುದಾಗಿ ಹೇಳಿದರು.

Reliance Retail's standalone Swadesh store opens in Hyderabad - The Hindu

ಹೈದರಾಬಾದ್‌ನಲ್ಲಿರುವ ಸ್ವದೇಶಿ ಸ್ಟೋರ್ ಒಟ್ಟು 20 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಅಂಗಡಿಯಲ್ಲಿ ಕರಕುಶಲ ವಸ್ತುಗಳ ಜೊತೆಗೆ ಆಹಾರ ಪದಾರ್ಥಗಳು ಮತ್ತು ಬಟ್ಟೆಗಳಿವೆ. ಈ ಅಂಗಡಿಯಲ್ಲಿ ಇರಿಸಲಾಗಿರುವ ವಸ್ತುಗಳ ಮೇಲೆ ಸ್ಕ್ಯಾನರ್ ಅನ್ನು ಸಹ ಸ್ಥಾಪಿಸಲಾಗಿದೆ. ಇಲ್ಲಿ ಗ್ರಾಹಕರು ‘ಸ್ಕ್ಯಾನ್ ಮಾಡಿ ತಿಳಿದುಕೊಳ್ಳಿ’ ಸೌಲಭ್ಯ ಪಡೆಯುತ್ತಾರೆ. ಸ್ಕ್ಯಾನ್ ಮಾಡುವ ಮೂಲಕ ನೀವು ಕ್ರಾಫ್ಟ್ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!