spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಶ್ವದ ಉತ್ತಮ ಉದ್ಯೋಗದಾತರ ಪಟ್ಟಿಯಲ್ಲಿ ರಿಲಯನ್ಸ್

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಫೋರ್ಬ್ಸ್ ಪ್ರಕಟಿಸಿದ ವಿಶ್ವದ ಅತ್ಯುತ್ತಮ ಉದ್ಯೋಗದಾತರ ಶ್ರೇಯಾಂಕದಲ್ಲಿ ದೇಶದ ಅತಿದೊಡ್ಡ ಸಂಸ್ಥೆ ರಿಲಯನ್ಸ್ ಕೂಡ ಸ್ಥಾನ ಪಡೆದಿದೆ.
750 ಜಾಗತಿಕ ಉದ್ಯೋಗ ಸಂಸ್ಥೆಗಳ ಒಟ್ಟಾರೆ ಶ್ರೇಯಾಂಕದಲ್ಲಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಗೆ 52ನೇ ಸ್ಥಾನ ಲಭಿಸಿದೆ.
ಫೋರ್ಬ್ಸ್ ಪಟ್ಟಿಯ ಮೊದಲ 100 ಕಂಪನಿಗಳಲ್ಲಿ ರಿಲಯನ್ಸ್ ಹೊರತುಪಡಿಸಿ ಐಸಿಐಸಿಐ ಬ್ಯಾಂಕ್ (65), ಎಚ್‌ಡಿಎಫ್‌ಸಿ ಬ್ಯಾಂಕ್ (77), ಎಚ್‌ಸಿಎಲ್ ಟೆಕ್ನಾಲಜೀಸ್ (90) ಸ್ಥಾನದಲ್ಲಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (119), ಎಲ್‌&ಟಿ (127), ಎಲ್‌ಐಸಿ (504), ಇನ್ಫೊಸಿಸ್ (588), ಟಾಟಾ ಸಮೂಹ (746) ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಮೊದಲ ಸ್ಥಾನದಲ್ಲಿದ್ದು, ನಂತರ ಅಮೆರಿಕದ ಐಬಿಎಂ, ಮೈಕ್ರೊಸಾಫ್ಟ್‌, ಅಮೆಜಾನ್, ಆಪಲ್, ಆಲ್ಫಾಬೆಟ್ ಮತ್ತು ಡೆಲ್ ಟೆಕ್ನಾಲಜೀಸ್ ಸೇರಿವೆ.
ಫೋರ್ಬ್ಸ್ ಉದ್ಯೋಗಿಗಳ ನಡುವೆ ದೊಡ್ಡ ಪ್ರಮಾಣದ ಸಮೀಕ್ಷೆಯನ್ನು ನಡೆಸಿದ ಬಳಿಕ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವೇಳೆ 58 ರಾಷ್ಟ್ರಗಳ 1,50,000 ಉದ್ಯೋಗಿಗಳ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಗಾಗಿ ಫೋರ್ಬ್ಸ್ ಸಂಸ್ಥೆ ಸ್ಟಾಟಿಸ್ಟಾ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss