Tuesday, July 5, 2022

Latest Posts

ಇಟಾಲಿಯನ್ ನೌಕಾಪಡೆಯಿಂದ ಕೊಲ್ಲಲ್ಪಟ್ಟ ಇಬ್ಬರು ಮೀನುಗಾರರ ಖಾತೆಗೆ ಪರಿಹಾರ ಜಮಾ ಮಾಡಿ: ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ

ಹೊಸದಿಗಂತ ಆನ್ ಲೈನ್ ಡೆಸ್ಕ್:

2012 ರ ಫೆಬ್ರವರಿಯಲ್ಲಿ ಕೇರಳ ಕರಾವಳಿಯಲ್ಲಿ ಇಟಾಲಿಯನ್ ನೌಕಾಪಡೆಯಿಂದ ಕೊಲ್ಲಲ್ಪಟ್ಟ ಇಬ್ಬರು ಭಾರತೀಯ ಮೀನುಗಾರರ ಸಂಬಂಧಿಕರಿಗೆ ಇಟಲಿ ನೀಡಿದ ಪರಿಹಾರವನ್ನು ತನ್ನ ಖಾತೆಗೆ ಜಮಾ ಮಾಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಪರಿಹಾರ ಮೊತ್ತವನ್ನು ತನ್ನ ಖಾತೆಗೆ ಜಮಾ ಮಾಡಿದ ಒಂದು ವಾರದ ನಂತರ, ಇಟಾಲಿಯನ್ ನೌಕಪಡೆ ವಿರುದ್ಧದ ಪ್ರಕರಣವನ್ನು ಮುಚ್ಚಿಹಾಕುವ ಕೇಂದ್ರದ ಮನವಿಯನ್ನು ಆಲಿಸುವುದಾಗಿ ಉನ್ನತ ನ್ಯಾಯಾಲಯ ತಿಳಿಸಿದೆ.
ಹತ್ಯೆಗೀಡಾದ ಮೀನುಗಾರರ ರಕ್ತ ಸಂಬಂಧಿಗಳಿಗೆ ಪರಿಹಾರವನ್ನು ನ್ಯಾಯಾಲಯ ವಿತರಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರ ನ್ಯಾಯಪೀಠ ಹೇಳಿದೆ.
ಫೆಬ್ರವರಿ 2012 ರಲ್ಲಿ, ಇಟಲಿಯ ಧ್ವಜಾವಿದ್ದ ತೈಲ ಟ್ಯಾಂಕರ್ – ಎಂವಿ ಎನ್ರಿಕಾ ಲೆಕ್ಸಿ ಹಡಗಿನಲ್ಲಿದ್ದ ಇಬ್ಬರು ಇಟಾಲಿಯನ್ ನೌಕಾಪಡೆಗಳಾದ ಸಾಲ್ವಟೋರ್ ಗಿರೋನ್ ಮತ್ತು ಮಾಸ್ಸಿಮಿಲಿಯಾನೊ ಲ್ಯಾಟೊರೆ – ಭಾರತದ ವಿಶೇಷ ಆರ್ಥಿಕ ವಲಯದ ಮೀನುಗಾರಿಕಾ ಹಡಗಿನಲ್ಲಿದ್ದ ಇಬ್ಬರು ಭಾರತೀಯ ಮೀನುಗಾರರನ್ನು ಕೊಂದಿದ್ದಾರೆ ಎಂದು ಭಾರತ ಆರೋಪಿಸಿತ್ತು.
ಕಳೆದ ವರ್ಷ ಆಗಸ್ಟ್ 7 ರಂದು, ಇಬ್ಬರು ಇಟಾಲಿಯನ್ ನೌಕಾಪಡೆಗಳ ವಿರುದ್ಧದ ಪ್ರಕರಣಗಳನ್ನು ಮುಚ್ಚುವಂತೆ ಕೋರಿ ಸಲ್ಲಿಸಿದ ಮನವಿಯ ಮೇಲೆ ಯಾವುದೇ ಆದೇಶವನ್ನು ಜಾರಿಗೊಳಿಸುವುದಿಲ್ಲ ಎಂದು ಉನ್ನತ ನ್ಯಾಯಾಲಯವು ಕೇಂದ್ರಕ್ಕೆ ಸ್ಪಷ್ಟಪಡಿಸಿತ್ತು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss