ಉತ್ತಮವಾದ ಆರೋಗ್ಯ ಸೇವೆ ನೀಡುವ ಮೂಲಕ ಭಾಗದ ಕೊರಗು ನಿವಾರಣೆ: ಎಚ್.ಡಿ.ಕುಮಾರಸ್ವಾಮಿ

ಹೊಸದಿಗಂತ ವರದಿ, ಕಲಬುರಗಿ:

ಕಲ್ಯಾಣ ಕನಾ೯ಟಕ ಭಾಗದ ಜನರಿಗೆ ಉತ್ತಮವಾದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಈ ಭಾಗದ ಜನರ ಕೊರಗನ್ನು ಯುನೈಟೆಡ್ ನೂತನ ಆಸ್ಪತ್ರೆ ನಿವಾರಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ನೂತನ ಯುನೈಟೆಡ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ೬೦ ಬೆಡ್ ಆಸ್ಪತ್ರೆ ಮೂಲಕ ಉತ್ತಮ ಆರೋಗ್ಯ ಸೇವೆ ಸಲ್ಲಿಸಲು ಮುಂದಾಗಿದ್ದು, ಈ ಭಾಗದ ಜನರಿಗೆ ಸದ್ಬಳಕೆಯಾಗಲಿ ಎಂದು ಹೇಳಿದರು.

ಈ ಭಾಗದ ಜನರು ಪ್ರತಿಯೊಂದು ಆರೋಗ್ಯದ ಸಮಸ್ಯೆಯಾದಾಗ ಮೊದಲು ಹೈದರಾಬಾದ್‌ಗೆ ಹೋಗುವ ಅನಿವಾರ್ಯ ಪರಿಸ್ಥಿತಿಯಿತ್ತು. ಅದರಲ್ಲೂ ಹೃದಯದ ಕಾಯಿಲೆ, ಕಿಡ್ನಿಘಿ, ಕ್ಯಾನ್ಸರ್ ತೊಂದರೆಯಿದ್ದಾಗ ಬೇರೆ ನಗರಗಳಿಗೆ ಹೋಗುತ್ತಿದ್ದರು. ಆದರೆ, ಈಗ ಕಲಬುರಗಿ ನಗರ ಹಂತ ಹಂತವಾಗಿ ಆರೋಗ್ಯ ಕ್ಷೇತ್ರದಲ್ಲೂ ಬೆಳೆವಣಿಗೆ ಕಾಣುತ್ತಿದ್ದು, ಇಲ್ಲಿಯೂ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

೨೦೧೮ರಲ್ಲಿ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿ ಇದ್ದಾಗ ಈ ಭಾಗದ ಆರೋಗ್ಯ ಸಮಸ್ಯೆಗಳನ್ನು ಅರಿತುಕೊಂಡು ಬೆಂಗಳೂರಲ್ಲಿರುವ ಜಯದೇವ ಅಸ್ಪತ್ರೆಯ ಬ್ಯ್ರಾಂಚ್ ಇಲ್ಲಿ ಆರಂಭಿಸಬೇಕು ಎಂದು ೧೮೦ ಕೋಟಿ ರೂ. ವೆಚ್ಚದಲ್ಲಿ ಅಂದು ಚಾಲನೆ ನೀಡಲಾಗಿತ್ತು. ಜಯದೇವ ಆರಂಭವಾದ ಮೇಲೆ ಬಡ ಕುಟುಂಬಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಈ ಆಸ್ಪತ್ರೆ ಇರದಿದ್ದರೆ ಹೈದರಾಬಾದ್‌ಗೆ ಹೋಗಿ ಲಕ್ಷಾಂತರ ರೂ. ಖರ್ಚು ಮಾಡಬೇಕಾದ ಅನಿವಾರ್ಯತೆ ಇರುತಿತ್ತು ಎಂದು ಹೇಳಿದರು. ವಿಕ್ರಂ ಸಿದ್ಧಾರೆಡ್ಡಿ ಅವರ ನೇತೃತ್ವದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಈ ಭಾಗದ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆ ದೊರೆಯಲಿ ಎಂದು ಶುಭಹಾರೈಸಿದರು.

ಯುನೈಟೆಡ್ ಆಸ್ಪತ್ರೆಯ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿಕ್ರಂ ಸಿದ್ಧಾರೆಡ್ಡಿ ಮಾತನಾಡಿ, ತುರ್ತು ಚಿಕಿತ್ಸೆಯಲ್ಲಿ ಉತ್ಕೃಷ್ಟ ಸೇವೆ ನೀಡಬೇಕೆಂದು ೧೦ ವರ್ಷದ ಕೆಳಗೆ ಆಸ್ಪತ್ರೆ ಆರಂಭಿಸಲಾಗಿತ್ತು. ಈ ಭಾಗದ ಜನರಿಗೆ ಆರೋಗ್ಯ ಸೇವೆ ನೀಡಲು ತನಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದ ಅವರು, ಮುಂದೆಯೂ ಇದೇರೀತಿ ಉತ್ಕೃಷ್ಟವಾದ ಆರೋಗ್ಯ ಸೇವೆಯನ್ನು ಜನರಿಗೆ ನೀಡಲಾಗುವುದು. ಜನರ ನಂಬಿಕೆಯನ್ನು ಉಳಿಸಿಕೊಳ್ಳಲಿದ್ದೇವೆ ಎಂದು ಹೇಳಿದರು.

ಯುನೈಟೆಡ್ ಆಸ್ಪತ್ರೆಯ ಪ್ರತಿಯೊಬ್ಬ ವೈದ್ಯರು, ಸಿಬ್ಬಂದಿಯ ಟೀಮ್ ವರ್ಕ್, ಕಾರ್ಯತತ್ಪರತೆ, ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿದ್ದೇವೆ ಎಂದು ಹೇಳಿದರು.

ಶಾಸಕರಾದ ಪ್ರಿಯಾಂಕ್ ಖರ್ಗೆ, ಅವಿನಾಶ ಜಾಧವ್, ಶರಣಬಸಪ್ಪ ದರ್ಶನಾಪುರ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಘಿ, ಮಾಜಿ ಎಂಎಲ್‌ಸಿ ತಿಪ್ಪಣಪ್ಪ ಕಮಕನೂರ, ಅಮರನಾಥ ಪಾಟೀಲ್, ನೀಲಕಂಠರಾವ್ ಮೂಲಗೆ, ಬಂಡೆಪ್ಪ ಕಾಶೆಂಪುರ, ಅಲ್ಲಮಪ್ರಭು ಪಾಟೀಲ್, ಸಂತೋಷ ಪಾಟೀಲ್, ಸಂಜು ಯಾಕಾಪುರೆ, ಶಾಮರಾವ್ ಸೂರನ್, ಕೃಷ್ಣಾರೆಡ್ಡಿ, ಮನೋಹರ ಪೊದ್ದಾರ್, ಡಾ.ವೀಣಾ ಸಿದ್ದಾರೆಡ್ಡಿ, ಡಾ.ರಾಜಕುಮಾರ ಕುಲಕರ್ಣಿ, ಡಾ. ಮೊಹ್ಮದ್ ಅಬ್ದುಲ್ ಬಶೀರ, ಡಾ.ಉಡುಪಿ ಕೃಷ್ಣ ಜೋಶಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!