Thursday, August 18, 2022

Latest Posts

ಬದಲಾವಣೆಯೊಂದೇ ಜಗದ ಶಾಶ್ವತ ನಿಯಮ, ಹೊಂದಿಕೊಂಡು ಜೀವನ ನಡೆಸುವುದೇ ಧರ್ಮ: ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಹೊಸ ದಿಗಂತ ವರದಿ,ಮಂಡ್ಯ:

ಬದಲಾವಣೆಯೊಂದೇ ಜಗದ ಶಾಶ್ವತ ನಿಯಮ ಅದಕ್ಕೆ ಹೊಂದಿಕೊಂಡು ಜೀವನ ನಡೆಸುವುದು ಎಲ್ಲರ ಕರ್ತವ್ಯಘಿ. ಹುಟ್ಟು-ಸಾವು ಸಹಜ. ಇದನ್ನು ಅರ್ಥ ಮಾಡಿಕೊಂಡು ಸಮಾಜ ಸೇವೆಯಲ್ಲಿ ತೊಡಗುವುದೇ ನಿಜವಾದ ಧರ್ಮ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದ ಕುವೆಂಪು ಬಯಲು ರಂಗ ಮಂದಿರದಲ್ಲಿ ಪಟೇಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ವೀರಯೋಧ ಆರ್. ಲೋಕೇಶ್ ಪಟೇಲ್ ಜ್ಞಾಪಕಾರ್ಥವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಹಾಗೂ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಜಗತ್ತಿನಲ್ಲಿ ಒಬ್ಬರನ್ನೊಬ್ಬರ ಅಗಲಿಕೆ ಶಾಶ್ವತ. ಮರಕ್ಕೆ ಆಶ್ರಯ ಬಯಸಿ ಬರುವ ಪಕ್ಷಿಗಳ ಹಾಗೆ ನಾವಿರುತ್ತೇವೆ. ಪಕ್ಷಿ ಹಾರಿ ಹೋಗುವಾಗ ಮರ ಅಳುವುದಿಲ್ಲ. ಮರವನ್ನು ಬಿಟ್ಟು ಹೋಗುವಾಗ ಪಕ್ಷಿಗಳು ದುಃಖಿಸುವುದಿಲ್ಲ. ಹಾಗೆ ಜೀವನದಲ್ಲಿ ಒಬ್ಬರನ್ನೊಬ್ಬರ ಅಗಲಿಕೆ ಸಾಮಾನ್ಯ ಎಂದು ಜೀವನದ ಸಾರವನ್ನು ವಿವರಿಸಿದರು.
ಹುಟ್ಟು ಬೆಳವಣಿಗೆ ಸಾವು ಪ್ರತಿಯೊಬ್ಬರಿಗೂ ಶಾಶ್ವತ. ಸಂಬಂಧಗಳ ಬೆಸುಗೆಯಲ್ಲಿ ಸಾವಿನ ಸಂದರ್ಭದಲ್ಲಿ ನೋವು ಸಹಜ. ಇಂತಹ ಸಮಯದಲ್ಲಿ ಸೇವೆ ಮಾಡುವ ಮನಸ್ಸಿದ್ದರೆ, ಬೇರೆಯವರ ಕಷ್ಟ ನೋಡಲು ಅಣಿಯಾಗಿದ್ದರೆ, ತನ್ನ ಕಷ್ಟ ನೋವು ಅರಿವಿಗೆ ಬರುವುದಿಲ್ಲ. ಈ ನಿಟ್ಟಿನಲ್ಲಿ ರಾಜಶೇಖರಯ್ಯ ದಂಪತಿಗಳು ತಮ್ಮನ್ನು ಸಮಾಜಸೇವೆಗೆ ತೊಡಗಿಸಿಕೊಂಡಿರುವುದು ಔಚಿತ್ಯಪೂರ್ಣ ಎಂದು ಪ್ರಶಂಸಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!