Monday, August 8, 2022

Latest Posts

ರೆಮ್ಡಿಸಿವಿರ್ ಅಕ್ರಮ ದಂಧೆ: ಮತ್ತೆ ಮೂವರು ಪ್ರಭಾವಿಗಳ ಬಂಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಬಳ್ಳಾರಿ:

ಕೋವಿಡ್-19 ಮಹಾ ಹೆಮ್ಮಾರಿಗೆ ರಾಮಬಾಣ ಎಂದು ಹೇಳಲಾಗುತ್ತಿರುವ ರೆಮ್ಡಿಸಿವಿರ್ ಅಕ್ರಮ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರು ಪ್ರಭಾವಿ ವ್ಯಕ್ತಿಗಳನ್ನು ಬಂಧಿಸಿ ಬಿಸಿ‌ ಮುಟ್ಟಿಸಿದ್ದಾರೆ. ಈ ಅಕ್ರಮ ದಂಧೆಗೆ ಸಂಬಂಧಿಸಿದಂತೆ ಪೊಲೀಸರು ಕಿಶೋರ್ ಎನ್ನುವ ವ್ಯಕ್ತಿಯನ್ನು ಬಂಧಸಿದ್ದರು. ಈ ಪ್ರಕರಣವನ್ನು‌ ಬೇಧಿಸಿದ ಪೊಲೀಸರು ಮೂವರು‌ ಪ್ರಭಾವಿಗಳನ್ನು‌ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ಉದ್ಯಮಿ ಪೋಲಾ ಪ್ರವೀಣ್, ಉದ್ಯಮಿ, ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ, ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯ ಸಿಂಡಿಕೇಟ್ ಸದಸ್ಯ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ ಹಾಗೂ ಮಂಜುನಾಥ ಮೆಡಕಲ್ ಏಜೆನ್ಸಿ ಮಾಲೀಕ ವೆಂಕಟೇಶ್ ಬಾಬು‌ ಬಂಧಿತರು.
ಮಹಾಮಾರಿ ಈ ಸೊಂಕಿನ ಚೈನ್‌ ಲಿಂಕ್ ಕಟ್ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಕಠಿಣ ಕ್ರಮ ಕೈಗೊಂಡಿದೆ. ಸೊಂಕಿತರಿಗೆ ರಾಮಬಾಣ, ಸೊಂಕು ಆವರಿಸಿದವರಿಗೆ ಅದರ ವಿರುದ್ಧ ಹೋರಾಡುವ ದಿವ್ಯ ಔಷಧಿ ಎಂದು ಹೇಳಾಗುತ್ತಿರುವ ರೆಮ್ಡಿಸಿವಿರ್ ಗೆ‌ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. 3 ಸಾವಿರ ರೂ.ಗೆ ಒಂದರಂತೆ ದೊರೆಯಬೇಕಿದ್ದ ರೆಮ್ಡಿಸಿವಿರ್ ಇಂಜೆಕ್ಷನ್ ನನ್ನು ದಂಧೆಕೋರರು 30 ಸಾವಿರ ರೂ.ಗೆ ಒಂದರಂತೆ ಮಾರಾಟ ಮಾಡುವ ಜಾಲ ಸದ್ದಿಲ್ಲದೇ ನಡೆಯುತ್ತಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡ ಜಿಲ್ಲಾ ಪೊಲೀಸ್ ಇಲಾಖೆ, ಈಗಾಗಲೇ ಒಬ್ಬರನ್ನು ವಶಕ್ಕೆ ಪಡೆದಿದೆ. ಇದರ ಹಿಂದಿನ‌ ಕಿಂಗ್ ‌ಪಿನ್ ಯ್ಯಾರು ಎಂದು ಪತ್ತೆ ಹಚ್ಚಲು‌ ಮುಂದಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ರು ಗುರುವರ ಮತ್ತೆ ಮೂರು ಜನ ಪ್ರತಿಷ್ಟಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜನ ಪ್ರತಿನಿಧಿಗಳ ಒತ್ತಡದಿಂದ ಪೊಲೀಸರು ಈ ಪ್ರಕರಣದಲ್ಲಿ ಬಂಧಿತ ಆರೋಪಿ ಕಿಶೋರ್ ಹಿಂದೆ ನಗರದ ಪ್ರಬಲ ಶಕ್ತಿಗಳನ್ನು ಕೈ ಬಿಡುತ್ತಿದ್ದಾರೆ. ಈ ದಂಧೆಯಲ್ಲಿ ಭಾಗಿಯಾಗಿರುವವನ್ನು ಮುಟ್ಟಕೂಡದು ಎಂದು ಆಡಳಿತ ಪಕ್ಷದ ಬಿಜೆಪಿ ಮುಖಂಡರಿಂದ ಒತ್ತಡಗಳಿವೆ ಎನ್ನುವ ಮಾತುಗಳು ಹರಿದಾಡಿದ್ದವು. ಕೆಲವರು ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಬಿಜೆಪಿ ಅವರನ್ನು ಹಣಿಯಲು ಮುಂದಾಗಿದ್ದರು.
ಇದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಈ ಅಕ್ರಮ ದಂಧೆ ನುಂಗಲಾರದ ತುಪ್ಪವಾಗಿ ಪರಿಣಮಿಸಿತ್ತು. ಮಾಧ್ಯಮಗಳ ಎದುರು ಈ ಕುರಿತು ಮಾತನಾಡಿ, ಈ ಅಕ್ರಮ ದಂಧೆ ಪ್ರಕರಣವನ್ನು ಹಾಗೂ ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ರಕ್ಷಿಸುವ‌ಮಾತೇ ಇಲ್ಲ. ತನಿಖೆ ಮುಂದುವರೆದಿದೆ. ಶೀಘ್ರದಲ್ಲೇ ಎಲ್ಲರನ್ನೂ ಬಂಧಿಸಲಾಗುವುದು ಎಂದಿದ್ದರು. ಇದಕ್ಕೆ ಎಸ್ಪಿ ಸೈದಲು ಅಡಾವತ್ ಅವರೂ ಪ್ರಕರಣವನ್ನು ಕೈಬಿಡುವ ಮಾತೇ ಇಲ್ಲ, ಎಷ್ಟೇ ಪ್ರಭಾವಿಗಳಿರಲಿ ಎಲ್ಲರನ್ನು ಬಂಧಸಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದಿದ್ದರು.
ಆದರೆ, ಈ ಪ್ರಕರಣದಲ್ಲಿ ಇವರಷ್ಷೇ ಅಲ್ಲ, ಇನ್ನೂ ಪ್ರತಿಷ್ಟಿತರಾದ, ವೈದ್ಯಕೀಯ ‌ವೃತ್ತಿಯಲ್ಲಿ‌ ಇರುವವರು ಭಾಗಿಯಾಗಿರುವ ಶಂಕೆಯಿದೆ. ಅವರನ್ನು ಬಂಧಿಸಬೇಕು, ಎಷ್ಟೇ ಪ್ರಭಾವಿಗಳು ಇರಲಿ, ಕಠಿಣ ಕ್ರಮ ಜರುಗಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss