Saturday, July 2, 2022

Latest Posts

ರೆಮ್ಡಿಸಿವಿರ್ ಔಷಧಿ ಅಕ್ರಮ ಮಾರಾಟ: ಇಬ್ಬರ ಬಂಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………

ಹೊಸ ದಿಗಂತ ವರದಿ, ವಿಜಯಪುರ:

ಅಕ್ರಮವಾಗಿ ರೆಮ್ಡಿಸಿವಿರ್ ಔಷಧಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಬಸವನಗರ ಬುರಣಾಪುರದ ಶ್ರೀಧರ ದಾನಪ್ಪ ಪಟ್ಟಣಶೆಟ್ಟಿ, ದ್ಯಾಬೇರಿಯ ವಿಠ್ಠಲ ಮದನ ಬಿರಾದಾರ ಬಂಧಿತ ಆರೋಪಿಗಳು.
ಈ ಆರೋಪಿಗಳು ರೆಮ್ಡಿಸಿವಿರ್ ಔಷಧಿಯನ್ನು 3,400 ರೂ.ಗಳಿಗೆ ಪಡೆದುಕೊಂಡು, ಅಕ್ರಮವಾಗಿ 26,000 ರೂ.ಗಳಿಗೆ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, 2 ರೆಮ್ಡಿಸಿವಿರ್ ಔಷಧಿ ಬಾಟಲಿಯನ್ನು ಜಪ್ತಿ ಮಾಡಲಾಗಿದೆ.
ಈ ಸಂಬಂಧ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss