ನೆಟೆರೋಗ ತೊಗರಿಗೆ ಪರಿಹಾರ: ಪಿಎಂ- ಸಿಎಂಗೆ ಅಭಿನಂದನೆ ಸಲ್ಲಿಸಿದ ತೇಲ್ಕೂರ್

ಹೊಸದಿಗಂತ ವರದಿ,ಕಲಬುರಗಿ:

ಕಲ್ಯಾ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿ ನೆಟೆರೋಗ ದಿಂದ ಹಾಳಾಗಿರುವುದಕ್ಕೆ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡುವ ಮುಖಾಂತರ ರೈತರ ನೆರವಿಗೆ ಧಾವಿಸಲಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.

ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಯ ಹಲವು ಭಾಗಗಳಲ್ಲಿ ತೊಗರಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ವರ್ಷ ನೆಟೆ ರೋಗದಿಂದಾಗಿ ಬೆಳೆ ಭಾಗಶಃ ಹಾನಿಯಾಗಿತ್ತು. ನೆಟೆರೋಗ ಪ್ರಕೃತಿ ವಿಕೋಪ ದಡಿ ಬಾರದೇ ಇದ್ದರೂ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ತಮ್ಮ ನೇತೃತ್ವದಲ್ಲಿ ಪರಿಹಾರ ಕೋರಿ ಮುಖ್ಯಮಂತ್ರಿ ಗಳ ಗಮನಕ್ಕೆ ತರಲಾಗಿತ್ತು. ಈಗ ಹೆಕ್ಟೇರ್ ಗೆ 10 ಸಾವಿರ ಪರಿಹಾರ ನೀಡಿರುವುದು. ಅದರಲ್ಲೂ ಎನ್ ಡಿ ಆರ್ ಎಫ್ ಮಾರ್ಗ ಸೂಚಿ ಪ್ರಕಾರ ಪರಿಹಾರ ನೀಡಿರುವುದು ರೈತರ ಸಂಕಷ್ಟಕ್ಕೆ ಸ್ಪಂದಿಸಿದಂತಾಗಿದೆ. ಈ ಮೂಲಕ ಸರ್ವ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಪ್ರತಿ ಹೆಕ್ಟೇರ್‌ಗೆ ರಾಜ್ಯ ಬಿಜೆಪಿ ಸರ್ಕಾರವು 10,000 ರೂ. ಪರಿಹಾರ ಘೋಷಿಸಿ, ರೈತರ ಬೆನ್ನಿಗೆ ನಿಂತಿರುವುದು ಸಂತೋಷದ ವಿಚಾರ. ನೆಟೆ ರೋಗದಿಂದ ತೊಗರಿ ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಧಾವಿಸಿ ಡಬಲ್ ಇಂಜಿನ್ ಸರ್ಕಾರ ಕೊಡುಗೆ ನೀಡಿದೆ.

ದತ್ತನ ಅಭಿವೃದ್ಧಿ ಗೆ ಬದ್ದ

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾಸ್ಥಳ ಜಿಲ್ಲೆಯ ದೇವಲ್ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಅಭಿವೃದ್ಧಿ ಗೆ 67 ಕೋ.ರೂ ನೀಲಿನಕ್ಷೆ ರೂಪಿಸಿ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 5 ಕೋ. ರೂ ನೀಡಿದ್ದಲ್ಲದೇ ಬರುವ ಬಜೆಟ್ ದಲ್ಲಿ ಅನುದಾನ ನಿಗದಪಡಿಸಲಾಗುವುದು ಎಂದು ಹೇಳಿರುವುದು ಸ್ವಾಗತ ಹಾಗೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಬಗೆಗೆ ಹೊಂದಿರುವ ಕಾಳಜಿ ನಿರೂಪಿಸುತ್ತದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!