Monday, August 8, 2022

Latest Posts

ಶ್ಯಾಂ ಪ್ರಸಾದ್ ಮುಖರ್ಜಿ ಪುಣ್ಯ ಸ್ಮರಣೆ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಒಂದು ಕೋಟಿ ಗಿಡ ನೆಡುವ ಗುರಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಮೈಸೂರು:

ಶ್ಯಾಂ ಪ್ರಸಾದ್ ಮುಖರ್ಜಿ ಯವರ ಪುಣ್ಯ ಸ್ಮರಣೆ  ಅಂಗವಾಗಿ ಕರ್ನಾಟಕ ರಾಜ್ಯದಲ್ಲಿ ವೃಕ್ಷಾರೋಹಣ ಕಾರ್ಯಕ್ರಮವನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಹಮ್ಮಿಕೊಂಡಿದ್ದು, ಒಂದು ಕೋಟಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಹಾಗೂ ರಾಜ್ಯ ವೃಕ್ಷರೋಹಣಾದ ಸಂಚಾಲಕ ಗೋವಿಂದರಾಜು ತಿಳಿಸಿದರು.

ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದನ್ನು  ಮನಗಂಡು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಒಂದು ಕೋಟಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಗುರಿ ಹೊಂದಲಾಗಿದೆ. ಇದಕ್ಕೆ ಕಾರಣ ಒಬ್ಬ ಮನುಷ್ಯನಿಗೆ ಒಂದು ದಿನಕ್ಕೆ ಏಳು ಮರಗಳ ಆಕ್ಸಿಜನ್ ಅವಶ್ಯಕತೆ ಇದೆ.

ವಿಜ್ಞಾನಿಗಳ ಸಲಹೆ ಹಾಗೂ ಮುಂದಿನ ಯುವ ಪೀಳಿಗೆಗೆ ಆಕ್ಸಿಜನ್‌ನ ಕೊರತೆಯಾಗಬಾರದು.  ಈ ನಿಟ್ಟಿನಲ್ಲಿ  ಮೈಸೂರು ನಗರ ಮತ್ತು ಗ್ರಾಮಾಂತರ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಒಂದು ಲಕ್ಷ ಸೀಡ್ ಬಾಲ್ ಗಳನ್ನು ಮಾಡುವ ಘಟಕವನ್ನು ಚಾಮುಂಡಿಬೆಟ್ಟದ ಉತ್ತನಹಳ್ಳಿ ರಿಂಗ್ ರಸ್ತೆಯಲ್ಲಿ ನಮ್ಮೆಲ್ಲ ಕಾರ್ಯಕರ್ತರು ಮಾಡುತ್ತಿದ್ದು,  ನಂತರ ಅದನ್ನು ಸಾಂಪ್ರದಾಯಿಕ ವಾಗಿ ಚಾಮುಂಡಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೀಡ್ ಬಾಲ್ ಎಸೆಯುವ ಮೂಲಕ  ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲು ಅವರು ಚಾಲನೆ ನೀಡಲಿದ್ದಾರೆ,

ತಯಾರು ಮಾಡಿದ ಸೀಡ್ ಬಾಲ್ ಗಳನ್ನು ಚಾಮುಂಡಿ ಬೆಟ್ಟ, ಎಚ್.ಡಿ.ಕೋಟೆಯ ಸುತ್ತ ಮುತ್ತಲಿನ ಕಾಡಿನ ಪ್ರದೇಶ, ಹುಣಸೂರಿನ ಕಾಡಿನ ಪ್ರದೇಶ,ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಪ್ರದೇಶ,ಪಿರಿಯಾಪಟ್ಟಣದ ಸುತ್ತಮುತ್ತಲಿನ ಗುಡ್ಡಗಾಡಿನ ಪ್ರದೇಶದಲ್ಲಿ ಹಾಕಲಿದ್ದಾರೆ.  ಸುಮಾರು ಒಂದು ಲಕ್ಷ ಸಂಖ್ಯೆಯ ರಕ್ತ ಚಂದನ,ಬೇವು,ಹೊಂಗೆ, ಗುಲ್ಮಾರು,ಕಾಡು ಬಾದಾಮಿ,ಬಿದಿರು,ನೇರಳೆ,ಹತ್ತಿ ಮುಂತಾದ ಸೀಡ್ ಬಾಲ್ ಗಳನ್ನು ಬಿಜೆಪಿ ಕಾರ್ಯಕರ್ತರುಗಳು ಹಾಕಲಿದ್ದಾರೆ. ಇದರ ತಯಾರಿಕೆಗೆ ಸುಮಾರು ಹತ್ತು ಟನ್ ಗೊಬ್ಬರ, ಒಂದು ಲಕ್ಷ ಎಲ್ಲಾ ತಳಿಯ ಬೀಜಗಳು, ಹತ್ತು ಟನ್ ಕೆಂಪು ಮಣ್ಣು, ನಾಲ್ಕು ಟನ್ ನೀರು ಮಿಶ್ರಿತ ಕಪ್ಪು ಮಣ್ಣು ತಯಾರು ಮಾಡಲು ಸುಮಾರು ನೂರು ಜನ ಕಾರ್ಯಕರ್ತರು ತೊಡಿಗಿರುವುದು ವಿಶೇಷವಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿ ಯಲ್ಲಿ  ಬಿಜೆಪಿ ಓ.ಬಿ.ಸಿ ಮೈಸೂರು ನಗರ ಅಧ್ಯಕ್ಷ ಜೋಗಿಮಂಜು, ಗ್ರಾಮಾಂತರ ಅಧ್ಯಕ್ಷ ಪರಶುರಾಮಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮೈ.ಪು.ರಾಜೇಶ್, ಉಮೇಶ್, ರಾಜ್ಯ ಬಿಜೆಪಿ ಓ.ಬಿ.ಸಿ.ಅಧ್ಯಕ್ಷ ನೇ.ಲ.ನರೇಂದ್ರ ಬಾಬು,  ಜಿಲ್ಲಾ ಉಸ್ತುವಾರಿ  ಎಸ್.ಟಿ.ಸೋಮಶೇಖರ್, ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹೆಚ್.ವಿಶ್ವನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಸಿದ್ದರಾಜು, ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ನಗರ ಅಧ್ಯಕ್ಷ ಟಿ.ಎಸ್.ಶ್ರೀ ವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಓ.ಬಿ.ಸಿ.ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು ಮತ್ತು ಇನ್ನಿತರರು ಉಪಸ್ಥಿತಿತರಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss