#RememberingSPB – ಕನ್ನಡದ ಬಗ್ಗೆ ಅದೇನೋ ವಿಶೇಷ ಪ್ರೀತಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎಸ್.ಪಿ. ಬಾಲಸುಬ್ರಮಣ್ಯಂ ಅವರಿಗೆ ಕನ್ನಡ ಕಂಡರೆ ಅದೇನೋ ವಿಶೇಷ ಪ್ರೀತಿ, ಸ್ಪಷ್ಟವಾಗಿ ಕನ್ನಡ ಹಾಡು ಹಾಡುವುದಷ್ಟೇ ಅಲ್ಲ, ಅಷ್ಟೇ ಸ್ವಷ್ಟವಾಗಿ ಕನ್ನಡ ಮಾತನಾಡುತ್ತಿದ್ದರು.
ಕನ್ನಡಿಗರು ನೀಡಿದ ಪ್ರೀತಿ, ವಾತ್ಸಲ್ಯ ಬೇರೆ ಯಾರಿಂದಲೂ ದೊರೆತಿಲ್ಲ. ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಿನಲ್ಲಿ ಹುಟ್ಟಲು ಬಯಸುತ್ತೇನೆ ಎಂದು ಎಸ್‌ಪಿಬಿ ಒಂದೊಮ್ಮೆ ಹೇಳಿದ್ದರು.
ಎಸ್‌ಪಿಬಿ ಅವರು ಹಾಡಿರುವ ಕನ್ನಡಾಭಿಮಾನದ ಗೀತೆಗಳು ಬಹುತೇಕ ಹಿಟ್ ಆಗಿವೆ. ‘ತಿರುಗುಬಾಣ’ ಚಿತ್ರದ ‘ಇದೇ ನಾಡು, ಇದೇ ಭಾಷೆ ಎಂದೆಂದೂ ನನ್ನದಾಗಿರಲಿ, ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನನ್ನ ಉಸಿರಲ್ಲಿ’ ಗೀತೆ ಎಸ್‌ಪಿಬಿ ಹಾಡಿದ ಮೊದಲ ಕನ್ನಡಾಭಿಮಾನದ ಹಾಡು. ಈ ಹಾಡು ಎಷ್ಟರ ಮಟ್ಟಗೆ ಪ್ರಸಿದ್ಧ ಎಂದರೆ ಈಗಿನ ಪೀಳಿಗೆಯ ಬಾಯಲ್ಲೂ ಈ ಹಾಡು ಕೇಳುತ್ತದೆ.
‘ನಾನು ನನ್ನ ಹೆಂಡ್ತಿ’ ಚಿತ್ರದ ‘ಕರುನಾಡ ತಾಯಿ ಸದಾ ಚಿನ್ಮಯಿ’, ‘ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ’, ‘ಕನ್ನಡ ರೋಮಾಂಚನವೀ ಕನ್ನಡ..’ ‘ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ’, ‘ಅಣ್ಣಾವ್ರು’ ಚಿತ್ರದ ‘ಕನ್ನಡಕ್ಕಾಗಿ ಜನನ, ಕನ್ನಡಕ್ಕಾಗಿ ಮರಣ’ ಹಾಡುಗಳು ಇಂದಿಗೂ ಕೇಳಲು ಸುಮಧುರವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!