Saturday, July 2, 2022

Latest Posts

ಕಾಳಸಂತೆಯಲ್ಲಿ ರೆಮ್‍ಡಿಸಿವಿರ್ ಇಂಜೆಕ್ಷನ್ ಅಕ್ರಮ ಮಾರಾಟ: ಮೂವರ ಬಂಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………


ಹೊಸ ದಿಗಂತ ವರದಿ, ಬೀದರ್:

ರೆಮ್ ಡಿಸಿವಿರ್ ಇಂಜೆಕ್ಷನ್ಗಳನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ನಿಗಧಿಪಡಿಸಿದ ದರಕ್ಕಿಂತ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದಂತೆ ನೂತನ ನಗರ ಪೊಲೀಸ್ ಠಾಣೆಯಲ್ಲಿ ಮೂವರ ಮೇಲೆ ಕಲಂ 18 (ಸಿ) ಡ್ರಗ್ಸ್ ಮತ್ತು ಕಾಸ್ಮಿಟಿಕ್ ಎಕ್ಟ್-1940, ಕಲಂ 7 ಅಗತ್ಯ ವಸ್ತುಗಳ ಕಾಯ್ದೆ ಮತ್ತು 409,420 ಜೊತೆ 34 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಜಾರಿಯಲ್ಲಿ ಇರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್.ಅವರು ತಿಳಿಸಿದ್ದಾರೆ.
ಬೀದರ ನಗರದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದರಿಂದ ಸಾಕಷ್ಟು ರೋಗಿಗಳ ಸಾವು – ನೋವು ಸಂಭವಿಸುತ್ತಿದೆ. ಈ ವಿಷಯವನ್ನೆ ಬಂಡವಾಳವಾಗಿಟ್ಟುಕೊಂಡು ಕೆಲವು ಜನರು ಜೀವ ಉಳಿಸುವಂತಹ ಔಷಧಿ ರೆಮ್‍ಡಿಸಿವರ್ ಇಂಜೆಕ್ಷನ್‍ಗಳನ್ನು ಕಾಳಸಂತೆಯಲ್ಲಿ ನಿಗಧಿಪಡಿಸಿದ ದರಕ್ಕಿಂತ ದುಪ್ಪಟ್ಟು ದರಕ್ಕೆ ಮಾರಾತ್ತಿರುವುದುದಾಗಿ ತಿಳಿದು ಬಂದಿರುತ್ತದೆ.
ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಅರೋಪಿತರನ್ನು ಬಂಧಿಸಿ ಸದರಿ ಕಾಳಸಂತೆಯ ದಂಧೆಯನ್ನು ನಿಯಂತ್ರಣಕ್ಕೆತರುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಗೋಪಾಲ ಬ್ಯಾಕೋಡ್, ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ ಬಸವೇಶ್ವರ ಹೀರಾ ಇವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರಾದ ಶ್ರೀ ಡಿ.ಜಿ.ರಾಜಣ್ಣಾ ಅವರ ನೇತೃತ್ವದಲ್ಲಿ ಪಿಎಸ್‍ಐಗಳಾದ ಶ್ರೀ ಸಂತೋಷ ಎಲ್.ಟಿ, ಶ್ರೀ ವೀರಣ್ಣ ಮಗಿ, ಪೊಲೀಸ್ ಕಾನಸ್ಟೇಬಲ್‍ಗಳಾದ ಮೋಹನರಾವ್, ಪ್ರಕಾಶ, ವೀರಣ್ಣ ಅವರನ್ನು ಒಳಗೊಂಡ ಒಂದು ತಂಡವನ್ನು ರಚಿಸಲಾಗಿತ್ತು.
ಈ ತಂಡವು ಖಚಿತ ಮಾಹಿತಿ ಮೇರೆಗೆ ದಿನಾಂಕ 06-05-2021 ರಾತ್ರಿ 10 ಗಂಟೆಗೆ ಸರಕಾರಿ ಆಸ್ಪತ್ರೆ ಬೀದರ ಹತ್ತಿರ ಯಾರೋ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ರೆಮ್‍ಡಿಸಿವರ್ ಇಂಜೆಕ್ಷನ್‍ಗಳನ್ನು ಕಾಳಸಂತೆಯಲ್ಲಿ ನಿಗಧಿಪಡಿಸಿದ ದರಕ್ಕಿಂತ ದುಪ್ಪಟ್ಟು ದರಕ್ಕೆ ಮಾರಾತ್ತಿರುವುದುದಾಗಿ ಖಚಿತಪಡಿಸಿಕೊಂಡು ಸದರಿಯವರಿಬ್ಬರ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಿ ಅವರ ಹತ್ತಿರ ಇದ್ದ ಎರಡು ರೆಮ್ ಡಿಸಿವರ್ ಇಂಜೆಕ್ಷನ್‍ಗಳನ್ನು ವಶಪಡಿಸಿಕೊಂಡು ಅವರನ್ನು ವಿಚಾರಿಸಲಾಗಿ, ರೆಮ್‍ಡಿಸಿವರ್ ಇಂಜೆಕ್ಷನಗಳನ್ನು ಖಾಸಗಿ ಆಸ್ಪತ್ರೆಯಿಂದ ತೆಗೆದುಕೊಂಡು ಬಂದು ಮಾರುತ್ತಿರುವುದಾಗಿ ತಿಳಿಸಿರುತ್ತಾರೆ. ಸದರಿ ಖಾಸಗಿ ಆಸ್ಪತ್ರೆಗೆ ಹತ್ತಿರವರೆ ತಮಗೆ ಖಾಸಗಿ ಆಸ್ಪತ್ರೆಗೆ ನಿಗಧಿಪಡಿಸಿದ ರೆಮ್ ಡಿಸಿವರ್ ಗಳನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ದುಪಟ್ಟು ದರಕ್ಕೆ ಮಾರಾಟ ಮಾಡಿಕೊಂಡು ಬಂದು ಲಾಭದ ಹಣವನ್ನು ನೀಡಲು ಸೂಚಿಸಿರುತ್ತಾರೆಂದು ತಿಳಿಸಿರುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಪ್ರಕಟನೆ ತಿಳಿಸಿದೆ.
ಈ ಯಶಸ್ವಿ ಕಾರ್ಯಾಚರಣೆ ಮಾಡಿದ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss