ಬೈಕಾಟ್ ಬಾಲಿವುಡ್ ಪದವನ್ನು ತೆಗೆದುಹಾಕಿ: ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ನಟ ಸುನಿಲ್ ಶೆಟ್ಟಿ ಮನವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ವಿರುದ್ಧ ಈಗಾಗಲೇ ದೇಶವ್ಯಾಪ್ತಿ ವಿರೋಧ ವ್ಯಕ್ತವಾಗುತ್ತಿದ್ದು, ಇದರ ನಡುವೆ ನಟ ಸುನಿಲ್ ಶೆಟ್ಟಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಬಳಿ ವಿಶೇಷ ಮನವಿ ಮಾಡಿದ್ದಾರೆ.

ಬಾಲಿವುಡ್‌ನಲ್ಲಿ 99ರಷ್ಟು ಮಂದಿ ಒಳ್ಳೆಯವವರು, ಎಲ್ಲರೂ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ, ಕಠಿಣ ಶ್ರಮದ ಕಡೆ ಗಮನ ಹರಿಸುತ್ತಾರೆ ಹಾಗಾಗಿ ಸದ್ಯ ಟ್ರೆಂಡಿಂಗ್‌ನಲ್ಲಿರುವ #BoycottBollywood ಪದ ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಬಾಲಿವುಡ್ ಇಮೇಜ್ ಅನ್ನು ಮತ್ತೆ ಪಡೆಯಲು ಸಾಧ್ಯ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಜೊತೆ ನಡೆಸಿದ ಸಂವಾದ ನಡೆಸಿದ ನಟ ಸುನಿಲ್ ಶೆಟ್ಟಿ , ಟ್ರೆಂಡಿಂಗ್‌ನಲ್ಲಿರುವ ಹ್ಯಾಷ್ ಟ್ಯಾಗ್ ಅನ್ನು ತೆಗೆದು ಹಾಕಬೇಕಿದೆ. ನಮ್ಮ ಕಥೆ, ನಮ್ಮ ಸಂಗೀತ ಜಗತ್ತಿಗೆ ಸಂಪರ್ಕ ಹೊಂದಿದೆ. ನಾವು ಬಾಲಿವುಡ್‌ಗೆ ಅಂಟಿರುವ ಕಳಂಕ ತೊಡೆದು ಹಾಕಬೇಕಿದೆ. ದಯವಿಟ್ಟು ಈ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಲುಪಿಸಿ’ ಎಂದು ಹೇಳಿದರು.

ಮುಂಬೈನಲ್ಲಿರುವ ಯೋಗಿ ಆದಿತ್ಯನಾಥ್ ಅವರು ಬಾಲಿವುಡ್‌ನ ಅನೇಕ ಸ್ಟಾರ್‌ಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಉತ್ತರ ಪ್ರದೇಶ ಭಾರತದ ಅತ್ಯಂತ ಸಿನಿಮಾ ಸ್ನೇಹಿ ರಾಜ್ಯ ಎಂದು ಪ್ರಚಾರ ಮಾಡುವ ಸಲುವಾಗಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಎರಡು ದಿನಗಳ ಕಾಲ ಮುಂಬೈ ಭೇಟಿಗೆ ಆಗಮಿಸಿದ್ದಾರೆ.

ಸುನಿಲ್ ಶೆಟ್ಟಿ ಜೊತೆಗೆ ಜಾಕಿ ಶ್ರಾಫ್, ರಾಜ್ ಗೋಪಾಲ್ ಯಾದವ್, ಸೋನು ನಿಗಮ್, ಬೋನಿ ಕಪೂರ್ ಸೇರಿದಂತೆ ಅನೇಕರು ಭೇಟಿಯಾಗಿದ್ದರು.

ಬಾಲಿವುಡ್‌ ನಲ್ಲಿ 2022ನಲ್ಲಿ ರಿಲೀಸ್ ಆದ ಹಿಂದಿ ಸಿನಿಮಾಗಳು ಹೆಚ್ಚು ಸಕ್ಸಸ್ ಕಂಡಿಲ್ಲ. ಕೆಲವು ಬೆರಳೆಣಿಕೆಯ ಸಿನಿಮಾಗಳು ಬಿಟ್ಟರೆ ಬೇರೆ ಯಾವುದೇ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿಲ್ಲ. ಹಾಗಾಗಿ ಬಾಲಿವುಡ್ ಕಂಗಾಲಾಗಿದ್ದಾರೆ.

2023 ಕೂಡ ಬೈಕಾಟ್ ಟ್ರೆಂಡ್ ವೈರಲ್ ಆಗುತ್ತಿರುತ್ತದೆ. ಇತ್ತೀಚಿಗಷ್ಟೆ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!