ಪರೀಕ್ಷಾ ಕೇಂದ್ರಕ್ಕೆ ಹೋಗೋ ಮುನ್ನ ಒಳಉಡುಪುಗಳನ್ನು ತೆಗೆಯಿರಿ, ವಿದ್ಯಾರ್ಥಿನಿಯರಿಗೆ ಇದೆಂಥಾ ಟಾರ್ಚರ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆನ್ನೈನ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆಗೆ ಹೋಗುವ ಮುನ್ನ ಹೆಣ್ಣುಮಕ್ಕಳು ತಮ್ಮ ಒಳಉಡುಪುಗಳನ್ನು ತೆಗೆದು ಹೋಗಬೇಕು ಎನ್ನುವ ರೂಲ್ಸ್ ಮಾಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ನೀಟ್ ಪರೀಕ್ಷಾ ಕೇಂದ್ರದೊಳಗೆ ಹೋಗಬೇಕೆಂದ್ರೆ ಒಳಉಡುಪುಗಳನ್ನು ತೆಗೆಯಬೇಕು, ಇಲ್ಲವಾದರೆ ಪ್ರವೇಶ ಇಲ್ಲ ಎಂದು ಸಿಬ್ಬಂದಿ ಹೇಳಿದ್ದು, ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆಟಲ್ ಡಿಟೆಕ್ಟರ್ ಇರುವ ಕಾರಣ ಒಳಉಡುಪುಗಳ ಹುಕ್‌ನಿಂದ ಸೌಂಡ್ ಬರುತ್ತದೆ, ಹಾಗಾಗಿ ಅದನ್ನು ತೆಗೆಯಬೇಕು ಎಂದು ಹೇಳಿದ್ದು, ವಿದ್ಯಾರ್ಥಿನಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ.

ಪೊಲೀಸರು ದೂರು ಸ್ವೀಕರಿಸಿದ್ದು, ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!