ಸಿಲಿಕಾನ್‌ ಸಿಟಿಯಲ್ಲಿ ಬ್ಯಾಚುಲರ್ಸ್‌ಗೆ ಹೊಸ ನಿಯಮ : ರಾತ್ರಿ 10 ಗಂಟೆಯ ನಂತರ ಮನೆಗೆ ಅತಿಥಿಗಳಿಗಿಲ್ಲ ಪ್ರವೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿರುವ ಬ್ಯಾಚುಲರ್​ಗಳು ಮತ್ತು ಅವಿವಾಹಿತ ಮಹಿಳೆಯರ ಮನೆಗಳಲ್ಲಿ ರಾತ್ರಿ 10 ಗಂಟೆಯ ನಂತರ ಅತಿಥಿಗಳು ಇರುವುದನ್ನು ನಿರ್ಬಂಧಿಸಿ ಮಾರ್ಗಸೂಚಿ ಹೊರಡಿಸಲಾಗಿದೆ. ನಗರದ ಹೌಸಿಂಗ್ ಸೊಸೈಟಿಯೊಂದು ಹೊರಡಿಸಿರುವ ಈ ಹೊಸ ಮಾರ್ಗಸೂಚಿಯನ್ನು ಕಂಡು ಬ್ಯಾಚುಲರ್ಸ್‌ಗಳು ಬೆರಗಾಗಿದ್ದಾರೆ.

ಬೆಂಗಳೂರಿನ ಕುಂದಲಹಳ್ಳಿ ಗೇಟ್‌ನಲ್ಲಿರುವ ಸೊಸೈಟಿಯೊಂದು ಹುಬ್ಬೇರಿಸುವ ಮಾರ್ಗಸೂಚಿಗಳನ್ನು ಹೊರಡಿಸಿದೆ. ಬ್ಯಾಚುಲರ್‌ಗಳು ಮತ್ತು ಅವಿವಾಹಿತ ಮಹಿಳೆಯರು ತಾವು ಬಾಡಿಗೆ ಪಡೆದಿರುವ ಫ್ಲ್ಯಾಟ್‌ಗಳಿಗೆ ರಾತ್ರಿ 10 ಗಂಟೆಯ ನಂತರ ಅತಿಥಿಗಳನ್ನು ಕರೆಯುವಂತಿಲ್ಲ. ಇಮೇಲ್ ಮೂಲಕ ಮಾಲೀಕರಿಂದ ಪೂರ್ವಾನುಮತಿ ಪಡೆಯದೇ ಮನೆಯಲ್ಲಿ ಯಾರನ್ನು ಇರಿಸಿಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದೆ.

ಈ ಕುರಿತಾಗಿ ಬ್ಯಾಚುಲರ್​ಗಳಿಗೆ ಬೆಂಗಳೂರು ಅಲ್ಲ ಎಂಬ ಶೀರ್ಷಿಕೆಯಡಿಯಲ್ಲಿ ಬಾಡಿಗೆ ಬಳಕೆದಾರರೊಬ್ಬರು ಬೆಂಗಳೂರಿನ ಮಾರತ್ತಹಳ್ಳಿಯಲ್ಲಿರುವ ಹೌಸಿಂಗ್ ಸೊಸೈಟಿ ಹೊರಡಿಸಿದ ಮಾರ್ಗಸೂಚಿಯನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ​ಆಗಿದೆ.

ಒಂದು ವೇಳೆ ಮನೆಗೆ ಬಂದ ನೆಂಟರು ಅಥವಾ ಗೆಳೆಯರು ರಾತ್ರಿ 10 ಗಂಟೆಯ ನಂತರವೂ ಮನೆಯಲ್ಲೇ ಇರಬೇಕೆಂದಿದ್ದರೆ ಗುರುತಿನ ಪುರಾವೆ ತೋರಿಸಬೇಕಿದೆ. ಅಲ್ಲದೇ ಹೌಸಿಂಗ್ ಸೊಸೈಟಿಯಿಂದ ಅನುಮತಿಯನ್ನು ಸಹ ಪಡೆಯಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!