ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಮಂಗಳೂರು
ಮಹಿಳೆಯರ ಸುರಕ್ಷತೆಗೆ ಟಾಸ್ಕ್ ಫೋರ್ಸ್ ರಚಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದುರ್ಗಾವಾಹಿನಿ ಮಂಗಳೂರು ವತಿಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.
ಮಂಗಳೂರಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೆಲಸ ಬಿಟ್ಟು ಮನೆಗೆ ತೆರಳುವ ಮಹಿಳೆಯರ ಮೈಮೇಲಿನ ಚಿನ್ನದ ಆಭರಣಗಳನ್ನು ಕಸಿಯುವ, ಅಲ್ಲದೆ ಅವರ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡುವುದು, ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋ ಹಾಕುವ ಕೃತ್ಯ, ಅಪ್ರಾಪ್ತ ಬಾಲಕಿಯರಿಗೆ ಫೋನ್ ಮೂಲಕ ಲೈಂಗಿಕ ಕಿರುಕುಳ ಹೆಚ್ಚಾಗುತ್ತಿದೆ. ಈ ಎಲ್ಲ ಪ್ರಕರಣಗಳನ್ನು ಪರಿಶೀಲಿಸಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಮಹಿಳಾ ಸುರಕ್ಷತೆಗೆ ಕಾರ್ಯಪಡೆಯನ್ನು (ಟಾಸ್ಕ್ ಫೋರ್ಸ್) ರಚಿಸಿ ಮಹಿಳೆಯರ ರಕ್ಷಣೆ ಮಾಡಬೇಕೆಂದು ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಿಭಾಗ ಮಾತೃಶಕ್ತಿ ಪ್ರಮುಖ್ ಸುರೇಖಾ ರಾಜ್, ಜಿಲ್ಲಾ ಮಾತೃಶಕ್ತಿ ಸಹಪ್ರಮುಖ್ ನಯನ ತೇಜ್, ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ಶ್ವೇತಾ ಅದ್ಯಪಾಡಿ ಮನವಿ ನೀಡಿದ ನಿಯೋಗದಲ್ಲಿ ಇದ್ದರು.