ಟರ್ಕಿ ಭೂಕಂಪವನ್ನ ಮೊದಲೇ ಊಹಿಸಿದ್ದ ಫ್ರಾಂಕ್: 3ದಿನಗಳ ಹಿಂದೆಯೇ ಎಚ್ಚರಿಸಿದ್ದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪನ ಸಂಭವಿಸಬಹುದು ಎಂದು ಅಲ್ಲಿನ ತಜ್ಞರು ಊಹಿಸಲು ಸಾಧ್ಯವಾಗಲಿಲ್ಲ. ಆದರೆ ಟರ್ಕಿ ಮತ್ತು ಸಿರಿಯಾದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಲಿದೆ ಎಂದು ನೆದರ್ಲೆಂಡ್ಸ್‌ನ ಸಂಶೋಧಕರೊಬ್ಬರು ಭವಿಷ್ಯ ನುಡಿದಿದ್ದರು. ಈ ತಿಂಗಳ 3 ರಂದು ಟರ್ಕಿ ಮತ್ತು ಸಿರಿಯಾದಲ್ಲಿ ಭಾರಿ ಭೂಕಂಪ ಸಂಭವಿಸಲಿದೆ ಎಂದು ಅವರು ಭವಿಷ್ಯ ನುಡಿದಿದ್ದರು.

ಸೌರವ್ಯೂಹದ ಸಮೀಕ್ಷೆಯ ಸಂಶೋಧಕ ಫ್ರಾಂಕ್ ಹೂಗರ್ ಬೀಟ್ಸ್ ಮೂರು ದಿನಗಳ ಹಿಂದೆ ಮುಂಬರುವ ಅಡಚಣೆಯ ಬಗ್ಗೆ ಎಚ್ಚರಿಸಿದ್ದಾರೆ. ಅವರು ತಮ್ಮ ಸಂಶೋಧನೆಯ ಸಾರಾಂಶವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹೇಳಿದ್ದು ಇದೀಗ ನಿಜವಾಗಿದೆ. ಅವರ ಅಂದಾಜಿನಲ್ಲಿ ಒಂದೇ ಒಂದು ಅಂಶದ ವ್ಯತ್ಯಾಸವಿರಲಿಲ್ಲ. ಸೋಮವಾರ (ಫೆಬ್ರವರಿ 6, 2023) ಮುಂಜಾನೆ ಭೂಕಂಪವು 1600 ಜನರನ್ನು ಬಲಿ ತೆಗೆದುಕೊಂಡಿತು.

ಮೊದಲ ಭೂಕಂಪದ ನಂತರ, ಫ್ರಾಂಕ್ ಮತ್ತೊಂದು ದೊಡ್ಡ ಭೂಕಂಪ ಸಂಭವಿಸಲಿದೆ ಎಂದು ಭವಿಷ್ಯ ನುಡಿದರು. ಅವರು ಹೇಳಿದಂತೆ ಎರಡನೇ ಬಾರಿಯೂ ಭೂಮಿ ಕಂಪಿಸಿತು. ಈ ತಿಂಗಳ 3 ರಂದೇ ಫ್ರಾಂಕ್ ಹೂಗರ್ ಬೀಟ್ಸ್ ಅವರು ದಕ್ಷಿಣ ಮತ್ತು ಮಧ್ಯ ಟರ್ಕಿ, ಜೋರ್ಡಾನ್, ಸಿರಿಯಾ ಮತ್ತು ಲೆಬನಾನ್ ಸುತ್ತಲಿನ ಪ್ರದೇಶ ಶೀಘ್ರದಲ್ಲೇ 7.5 ತೀವ್ರತೆಯ ಭೂಕಂಪವನ್ನು ಎದುರಿಸಬೇಕಾಗುತ್ತದೆ ಎಂದು ಟ್ವೀಟ್‌ ಮಾಡಿದ್ದರು.

ಟ್ವಿಟರ್‌ನಲ್ಲಿ ಕೆಲವರು ಫ್ರಾಂಕ್ ಮೇಲೆ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ನಮಗೆ ಕೆಟ್ಟದ್ದನ್ನು ಏಕೆ ಬಯಸುತ್ತಿದ್ದೀರಿ ಎಂದು ಫ್ರಾಂಕ್‌ಗೆ ಬೈದಿದ್ದೂ ಉಂಟು. ಆದರೆ, ಅವರ ಎರಡು ಭವಿಷ್ಯವಾಣಿ ನಿಜವಾಗಿದ್ದಕ್ಕೆ ಇದೀಗ ಕ್ಷಮೆಯಾಚಿಸಿದರು. ಮತ್ತೊಮ್ಮೆ ಭೂಕಂಪನದ ಸೂಚನೆಗಳಿವೆಯೇ ಎಂದು ವಿಚಾರಿಸುತ್ತಿದ್ದಾರಂತೆ. ಅವರ ಭವಿಷ್ಯ ನಿಜವಾಗಿದ್ದಕ್ಕೆ ಫ್ರಾಂಕ್ ದುಃಖ ವ್ಯಕ್ತಪಡಿಸಿದರು. ಇಷ್ಟೊಂದು ಮಂದಿ ಸಾವನ್ನಪ್ಪಿರುವುದು ನೋವು ತಂದಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!