Sunday, September 25, 2022

Latest Posts

ಜಮ್ಮು-ಕಾಶ್ಮೀರದ ಮಹಿಳೆಯನ್ನು ವರಿಸಿದ ಸ್ಥಳೀಯರಲ್ಲದವರಿಗೆ ವಾಸಸ್ಥಾನ ಪ್ರಮಾಣಪತ್ರ ಈಗ ಸಲೀಸು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಜಮ್ಮು-ಕಾಶ್ಮೀರದ ನಿವಾಸಿಯಲ್ಲದವರು ಅಲ್ಲಿನ ಹೆಣ್ಣನ್ನು ಮದುವೆಯಾದರೆ ಅವರಿಗೆ ಅಲ್ಲಿನ ವಾಸಸ್ಥಾನದ ಪ್ರಮಾಣಪತ್ರ ಸಿಗುತ್ತಿರಲಿಲ್ಲ. ಇದೀಗ ಆ ನಿಯಮಕ್ಕೆ ತಿದ್ದುಪಡಿಯಾಗಿದ್ದು ಸ್ಥಳೀಯ ಮಹಿಳೆಗೆ ವಾಸ ಪ್ರಮಾಣಪತ್ರವಿದ್ದು, ಆಕೆಯನ್ನು ಮದುವೆಯಾಗಿರುವ ಬಗ್ಗೆ ಅಧಿಕೃತ ಪ್ರಮಾಣಪತ್ರ ಹಾಜರು ಪಡಿಸಿದ್ದೇ ಆದಲ್ಲಿ ಅಂಥ ಪುರುಷರಿಗೆ ವಾಸಸ್ಥಾನದ ಪ್ರಮಾಣ ಪತ್ರ ಕೊಡುವ ಅಧಿಕಾರವನ್ನು ತಹಸಿಲ್ದಾರರಿಗೆ ನೀಡಿ ಆದೇಶ ಹೊರಡಿಸಲಾಗಿದೆ. 

2019ರ ಆಗಸ್ಟ್ ನಲ್ಲಿ 370ನೇ ವಿಧಿಯನ್ನು ತೆಗೆದುಹಾಕಿದ ನಂತರವೂ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ವಾಸಸ್ಥಾನ ಪ್ರಮಾಣಪತ್ರದ ನಿಯಮಗಳು ಹಾಗೆಯೇ ಉಳಿದುಕೊಂಡಿದ್ದವು. ಆ ಪ್ರಕಾರ, ಅಲ್ಲಿ 15 ವರ್ಷಗಳ ಕಾಲ ವಾಸ ಮಾಡಿರುವವರು ಅಥವಾ ಏಳು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿರುವವರಿಗೆ ಮಾತ್ರ ಅಂಥ ಪ್ರಮಾಣಪತ್ರ ಸಿಗುತ್ತಿತ್ತು.

ಈ ವಾಸಸ್ಥಾನದ ಪ್ರಮಾಣಪತ್ರ ಇರದಿದ್ದರೆ ಸರ್ಕಾರಿ ಉದ್ಯೋಗಗಳನ್ನು ಪಡೆಯುವುದಕ್ಕಾಗುತ್ತಿರಲಿಲ್ಲ. ಇದೀಗ ಜಮ್ಮು-ಕಾಶ್ಮೀರದ ಮಹಿಳೆಯನ್ನು ಮದುವೆಯಾದ ಯಾವುದೇ ಪುರುಷ ಸರಳವಾಗಿ ವಾಸಸ್ಥಾನದ ಪ್ರಮಾಣಪತ್ರ ಪಡೆಯಬಹುದಾಗಿದೆ. 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!