ಜ್ಯೂಸ್ ಬದಲು ಲಿಕ್ವಿಡ್ ಡಿಟರ್ಜೆಂಟ್ ಕೊಟ್ಟ ರೆಸ್ಟೋರೆಂಟ್, ಕುಡಿದ 7 ಮಂದಿ ಅಸ್ವಸ್ಥ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ರೆಸ್ಟೋರೆಂಟ್‌ನಲ್ಲಿ ಜ್ಯೂಸ್ ಬದಲು ಲಿಕ್ವಿಡ್ ಡಿಟರ್ಜೆಂಟ್ ನೀಡಿದ್ದು, ಅದನ್ನು ಸೇವಿಸಿದ ಏಳು ಮಂದಿ ಅಸ್ವಸ್ಥರಾಗಿದ್ದಾರೆ.

ಸಿಸ್ಟರ್ ವುಕಾಂಗ್ ಕುಟುಂಬದವರ ಜತೆ ರೆಸ್ಟೋರೆಂಟ್‌ಗೆ ಬಂದಿದ್ದು, ಬಾಟಲಿಯಲ್ಲಿ ಹಣ್ಣಿನ ರಸ ತಂದು ಇಟ್ಟಿದ್ದರು. ಅದನ್ನು ಕುಡಿದ ಸ್ವಲ್ಪ ಹೊತ್ತಿನಲ್ಲೇ ಹೊಟ್ಟೆಯಲ್ಲಿ ಕಿರಿಕಿರಿ ಆರಂಭವಾಗಿತ್ತು.

ಸ್ವಲ್ಪ ಸಮಯದ ನಂತರ ಎಲ್ಲರೂ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ಊಟಕ್ಕೆ ಬಂದಿದ್ದೆವು. ನನ್ನ ಗಂಡ ಜ್ಯೂಸ್ ಕುಡಿದು ಚೆನ್ನಾಗಿಲ್ಲ ಕಹಿ ಎಂದರು ಪರೀಕ್ಷಿಸಲು ಎಲ್ಲರೂ ಕುಡಿದೆವು. ಗಂಟಲು ಉರಿಯತೊಡಗಿತ್ತು. ವೈದ್ಯರು ಪಂಪ್ ಮಾಡಿ ಲಿಕ್ವಿಡ್ ಹೊರತೆಗೆದಿದ್ದಾರೆ. ಸರ್ವರ್ ಕಣ್ತಪ್ಪಿನಿಂದ ಈ ಸಮಸ್ಯೆಯಾಗಿದೆ, ಅವರು ಹೊಸ ಹೆಲ್ಪರ್ ಎಂದು ಸಿಸ್ಟರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!