ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಂಘೈ ನಗರದ ಔಟ್‌ಲೆಟ್‌ನಲ್ಲಿರುವ ಹಾಟ್‌ಪಾಟ್ ದೈತ್ಯ ಹೈಡಿಲಾವ್ ರೆಸ್ಟೋರೆಂಟ್‌ನಲ್ಲಿನ ಇಬ್ಬರು ಸಿಬ್ಬಂದಿಗಳು ಸೂಪ್ ನಲ್ಲಿ ಮೂತ್ರ ವಿಸರ್ಜಿಸಿದ ವಿಡಿಯೋ ಒಂದು ವೈರಲ್ ಆಗಿದೆ.
ಊಟ ಮಾಡಲು ಬಂದ ಇಬ್ಬರು ಹುಡುಗರು ರೆಸ್ಟೋರೆಂಟ್‌ನ ತಮ್ಮ ಖಾಸಗಿ ಕೋಣೆಯಲ್ಲಿ ಕುಳಿತು ಸೂಪ್ ಗೆ ಮೂತ್ರ ವಿಸರ್ಜಿಸಿ ಅದರ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆದ ನಂತರ ಹೈಡಿಲಾವ್ ಗ್ರಾಹಕರಿಗೆ ಪರಿಹಾರ ನೀಡುವುದಾಗಿ ತಿಳಿಸಿದೆ.
ಘಟನೆ ನಡೆದಿದ್ದು ತಮ್ಮ ರೆಸ್ಟೋರೆಂಟ್‌ನಲ್ಲಿ ಎಂದು ಹೈಡಿಲಾವ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಒಪ್ಪಿಕೊಂಡಿದೆ. ಅಲ್ಲದೆ ಈ ಘಟನೆ ನಡೆದ ನಾಲ್ಕು ದಿನಗಳ ನಂತರ ಸಮಸ್ಯೆಯ ಬಗ್ಗೆ ತಿಳಿದು ಬಂದಿದೆ. ಮೊದಲು ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಪರಿಹಾರ ವಿಳಂಬವಾಯಿತು ಎಂದು ಹೈಡಿಲಾವ್ ಸ್ಪಷ್ಟಪಡಿಸಿದೆ.
ತಮ್ಮ ಗ್ರಾಹಕರಾಗಿದ್ದ 4,000ಕ್ಕೂ ಹೆಚ್ಚು ಜನರಿಗೆ ಕಂಪನಿ ಪರಿಹಾರ ನೀಡಲು ಉದ್ದೇಶಿಸಿದೆ. ಆದರೆ ಪರಿಹಾರದ ಮೊತ್ತವನ್ನು ಕಂಪನಿ ಬಹಿರಂಗಪಡಿಸಿಲ್ಲ.
ಸೂಪ್ ಗೆ ಮೂತ್ರ ವಿಸರ್ಜಿಸಿದ ಯುವಕರನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಶಾಂಘೈ ಪೊಲೀಸರು ತಿಳಿಸಿದ್ದಾರೆ.