spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಯ್ದಿರಿಸದ ಟಿಕೇಟ್ ಕೌಂಟರ್ ಗಳಲ್ಲಿ ಪ್ರಯಾಣಿಕರಿಗೆ ಮಾಸಿಕ ಸೀಸನ್ ಟಿಕೆಟ್‌ ಸೌಲಭ್ಯ ಪುನರಾರಂಭ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಶಿವಮೊಗ್ಗ :

ಕಳೆದ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಕರೋನ ವೈರಸ್ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯಲು ನಿರ್ಬಂಧಗಳನ್ನು ಹೇರಿದ ನಂತರ ಭಾರತೀಯ ರೈಲ್ವೆಯಲ್ಲಿ ಸೀಸನ್ ಟಿಕೆಟ್ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಕರ್ನಾಟಕ ರಾಜ್ಯದಲ್ಲಿ ಲಾಕ್‌ಡೌನ್ ನಿಯಮಾವಳಿಗಳನ್ನು ಸಡಿಲಗೊಳಿಸಿದ ನಂತರ, ರೈಲ್ವೆ ನಿಲ್ದಾಣಗಳಲ್ಲಿ ಕಾಯ್ದಿರಿಸದ ಟಿಕೇಟ್ ಕೌಂಟರ್ ಗಳಲ್ಲಿ ಮತ್ತು UTSONMOBILE ಆಪ್‌ನಲ್ಲಿ ಪ್ರಯಾಣಿಕರಿಗೆ ಮಾಸಿಕ ಸೀಸನ್ ಟಿಕೆಟ್‌ಗಳ ಸೌಲಭ್ಯವನ್ನು 03 ನೇ ಆಗಸ್ಟ್ 2021 ರಿಂದ ಪುನರಾರಂಭಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ಲಾಕ್‌ಡೌನ್ ನಿರ್ಬಂಧಗಳನ್ನು ಅನುಸರಿಸಲು ರೈಲು ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ 23 ನೇ ಮಾರ್ಚ್ 2020 ರ ಮೊದಲು ನೀಡಲಾದ ಮಾನ್ಯ ಸೀಸನ್ ಟಿಕೆಟ್ ಹೊಂದಿದ್ದರೂ ಸಹ ಪ್ರಯಾಣ ಮಾಡುವ ಹಲವಾರು ದಿನಗಳ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅಂತಹ ಸೀಸನ್ ಟಿಕೆಟ್‌ನ ಕಾಲಮಿತಿಯನ್ನು ಕಳೆದುಕೊಂಡ ದಿನಗಳಿಗೆ ಅನುಸಾರವಾಗಿ ವಿಸ್ತರಿಸಲು ಈಗ ನಿರ್ಧರಿಸಲಾಗಿದ್ದು, 09 ಆಗಸ್ಟ್ 2021 ರಿಂದ UTS ಕೌಂಟರ್‌ಗಳಲ್ಲಿ ಉಳಿದ ದಿನಗಳಿಗೆ ತತ್ಸಮಾನವಾಗಿ ಸಕ್ರಿಯಗೊಳಿಸಲಾಗುತ್ತದೆ.
ಹಿಂದಿನಂತೆಯೇ ಸೀಸನ್ ಟಿಕೆಟ್ ಹೊಂದಿರುವವರಿಗೆ, ರೈಲುಗಳಲ್ಲಿ ಮತ್ತು ರೈಲ್ವೇ ಆವರಣದಲ್ಲಿ ಸೂಚಿತ ವ್ಯಕ್ತಿಗತ ದೂರ ಮಾರ್ಗಸೂಚಿಗಳು ಮತ್ತು ನೈರ್ಮಲ್ಯ ನಿಯಮಗಳನ್ನು ಸರಿಯಾಗಿ ಅನುಸರಿಸುವುದರೊಂದಿಗೆ, ಕಾಯ್ದಿರಿಸದ ರೈಲುಗಳು ಮತ್ತು ಕಾಯ್ದಿರಿಸದ ಕೋಚ್‌ಗಳಲ್ಲಿ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗುವುದು ಎಂದು ವಾಣಿಜ್ಯ ವಿಭಾಗದ ಹಿರಿಯ ವ್ಯವಸ್ಥಾಪಕರು ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss