Thursday, August 11, 2022

Latest Posts

ಪಕ್ಕದ ಮನೆಯವರೊಂದಿಗೆ ಮಗ ಜಗಳವಾಡಿದ್ದನ್ನು ನೋಡಿ ಗುಂಡು ಹಾರಿಸಿಕೊಂಡ ನಿವೃತ್ತ ಪೊಲೀಸ್​ ಪೇದೆ!!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಗ ಪಕ್ಕದ ಮನೆಯವರೊಂದಿಗೆ ಜಗಳವಾಡುತ್ತಿದ್ದಿದ್ದನ್ನು ನೋಡಿ ಮನ ನೊಂದು ತಂದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರ್ಘಟನೆ ನಡೆದಿರುವುದು ಉತ್ತರ ಪ್ರದೇಶದ ಜಲಾನ್​ನಲ್ಲಿ.

ಪೊಲೀಸ್​ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಕೆಲಸ ಮಾಡಿ ನಿವೃತ್ತಿ  ಪಡೆದಿದ್ದ ಶ್ಯಾಮಚರಣ್ ಚತುರ್ವೇದಿ ಮೃತ ದುರ್ದೈವಿ. ಇವರು ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಪರವಾನಗಿ ಪಡೆದ ರೈಫಲ್‌ನಿಂದ ತಲೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಮಗ ನೆರೆಹೊರೆಯವರೊಂದಿಗೆ ಜಗಳವಾಡುತ್ತಿದ್ದ. ಇದೇ ವಿಷಯವಾಗಿ ಮಗ ಪೊಲೀಸರಿಗೆ ದೂರು ನೀಡಿದ್ದ. ಆದರೆ ಪೊಲೀಸರು ಈ ಬಗ್ಗೆ ಯಾವುದೇ ಗಮನ ಕೊಟ್ಟಿಲ್ಲ. ಇದೇ ಕಾರಣಕ್ಕೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶ್ಯಾಮಚರಣ್ ಚತುರ್ವೇದಿ ಪತ್ನಿ ಆರೋಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss