CINEMA| ಅವತಾರ್-2 ನಿರ್ದೇಶಕರ ಬಗ್ಗೆ ರಾಮ್‌ಗೋಪಾಲ್ ವರ್ಮಾ ಪಾಸಿಟಿವ್ ಕಾಮೆಂಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಏನೇ ಮಾಡಿದರೂ ಸೆನ್ಸೇಷನ್ ಆಗುವುದು ಸಹಜ. ಆದರೆ ಇತ್ತೀಚಿಗೆ ಸಿನಿಮಾಗಳ ಬಗ್ಗೆ ತಮ್ಮದೇ ಆದ ವಿಮರ್ಶೆ ಹಾಗೂ ಕಾಮೆಂಟ್ ಗಳನ್ನು ಮಾಡುತ್ತಾ ಸದ್ದು ಮಾಡುತ್ತಿದ್ದಾರೆ. ಇದೀಗ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿರುವ ಹಾಲಿವುಡ್ ವಿಶುವಲ್ ವಂಡರ್ ‘ಅವತಾರ್-2’ ಕುರಿತು ವರ್ಮಾ ಪ್ರತಿಕ್ರಿಯಿಸಿದ್ದಾರೆ.

ಈ ಸಿನಿಮಾ ಒಂದು ಪವಾಡ ಎಂದು ‘ಅವತಾರ್-2’ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದರು. ಮತ್ತು ಈ ಚಿತ್ರವನ್ನು ನಿರ್ಮಿಸಿದ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಬಗ್ಗೆ ವರ್ಮಾ ಮತ್ತೊಮ್ಮೆ ತಾಜಾ ಕಾಮೆಂಟ್ಗಳನ್ನು ಮಾಡಿದ್ದಾರೆ. “ದೇವರು ಭೂಮಿಯನ್ನು ಸೃಷ್ಟಿಸಿದರೆ.. ಜೇಮ್ಸ್ ಕ್ಯಾಮರೂನ್ ಪಂಡೋರಾವನ್ನು ಸೃಷ್ಟಿಸಿದನು” ಎಂದು ವರ್ಮಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇಂತಹ ದೃಶ್ಯ ವಿಸ್ಮಯ ಚಿತ್ರಗಳು ಬರುವುದು ತೀರಾ ಅಪರೂಪ ಎಂದ ವರ್ಮಾ, ಇಷ್ಟು ಪರಿಪೂರ್ಣತೆಯಿಂದ ಚಿತ್ರ ಮಾಡುವುದು ಸಾಮಾನ್ಯ ಸಂಗತಿಯಲ್ಲ ಎಂಬ ಪಾಸಿಟಿವ್‌ ಕಮೆಂಟ್‌ ಮಾಡಿದ್ದಾರೆ.

ಈ ಸಿನಿಮಾದ ಭವ್ಯ ದೃಶ್ಯಗಳು ನನ್ನನ್ನು ಮಂತ್ರಮುಗ್ಧಗೊಳಿಸಿವೆ ಎಂದು ವರ್ಮಾ ಹೇಳಿದ್ದಾರೆ. ಏತನ್ಮಧ್ಯೆ, ಅವತಾರ್-2 ಚಿತ್ರವು ಮೊದಲ ಎರಡು ದಿನಗಳಲ್ಲಿ ಭಾರತದಾದ್ಯಂತ ರು.100 ಕೋಟಿ ಗಳಿಸಿದ್ದು, ಭವಿಷ್ಯದಲ್ಲಿ ಯಾವ ರೀತಿಯ ದಾಖಲೆಗಳನ್ನು ಸೃಷ್ಟಿಸುತ್ತದೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!