ಆ ಕಟ್ಟಡದ ಮೇಲೆ ʻಶಿವʼ ಕ್ಲೈಮ್ಯಾಕ್ಸ್ ಶೂಟ್ ನಡೆದಿತ್ತು: ಸ್ವಪ್ನಲೋಕ ಬೆಂಕಿ ದುರಂತ ಕುರಿತು ಆರ್‌ಜಿವಿ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾರ್ಚ್ 16ರ ಗುರುವಾರ ಸಿಕಂದರಾಬಾದ್‌ನ ಸ್ವಪ್ನಲೋಕ ಕಾಂಪ್ಲೆಕ್ಸ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು ಗೊತ್ತೇ ಇದೆ. ಈ ಅಗ್ನಿ ಅವಘಡದಲ್ಲಿ ಈಗಾಗಲೇ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸರ್ಕಾರ ಸ್ಪಂದಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಅಪಘಾತದ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದು, ಕುತೂಹಲಕಾರಿ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಈ ಘಟನೆಯ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಾ.. ಈ ಘಟನೆ ತುಂಬಾ ದುಃಖಕರವಾಗಿದೆ. ನನ್ನ ಮೊದಲ ಚಿತ್ರ ʻಶಿವʼ ನಾಗಾರ್ಜುನ ಮತ್ತು ರಘುವರನ್ ನಡುವಿನ ಕ್ಲೈಮ್ಯಾಕ್ಸ್ ಫೈಟ್ ಅನ್ನು ಈ ಕಟ್ಟಡದಲ್ಲಿ ಚಿತ್ರೀಕರಿಸಲಾಗಿದೆ ಎಂದರು. ಆರ್‌ಜಿವಿ ಮಾಡಿರುವ ಈ ಟ್ವೀಟ್ ವೈರಲ್ ಆಗಿದೆ.

ಶಿವ ಚಿತ್ರ ಬಿಡುಗಡೆಯಾಗಿ ಈಗಾಗಲೇ 33 ವರ್ಷಗಳು ಕಳೆದಿವೆ. ಸ್ವಪ್ನಲೋಕ ಕಟ್ಟಡ ಅಷ್ಟು ಹೊತ್ತಿಗೆ ನಿರ್ಮಾಣವಾಗಿದೆಯೇ, ಇಷ್ಟೊಂದು ಇತಿಹಾಸವಿದೆಯೇ, ಮೂರು ದಶಕಗಳ ಹಿಂದಿನ ಕಟ್ಟಡ ಇದಾಗಿತ್ತಾ ಎಂದು ಜನ ಆಶ್ಚರ್ಯ ಪಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!