ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತದಲ್ಲಿನ ಸ್ಪಿನ್ ಪಿಚ್ಗಳ ಕುರಿತಂತೆ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗರು ಟೀಕಿಸುವುದನ್ನು ಹಾಗೂ ಗೊಣಗುವುದನ್ನು ನಿಲ್ಲಿಸಬೇಕೆಂದು ವೆಸ್ಟಿಂಡೀಸ್ನ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಹೇಳಿದ್ದಾರೆ. ಅದರ ಬದಲಾಗಿ ಸ್ಪಿನ್ ಬೌಲಿಂಗಿಗೆ ಕೂಡ ಬ್ಯಾಟಿಂಗ್ ನಡೆಸಲು ಅಭ್ಯಾಸ ನಡೆಸುವಂತೆ ಕರೆ ನೀಡಿದ್ದಾರೆ.
ಕೆಲವು ದೇಶಗಳಲ್ಲಿ ಬ್ಯಾಟಿಂಗಿಗೆ ಅಸಾಧ್ಯವಾದ ವೇಗದ ಪಿಚ್ ನಿರ್ಮಿಸಲಾಗುತ್ತದೆ. ಅದನ್ನು ಯಾರೂ ಟೀಕಿಸುವುದಿಲ್ಲ. ಆದರೆ ಭಾರತದಲ್ಲಿ ಸ್ಪಿನ್ಗೆ ನೆರವಾಗುವ ಪಿಚ್ಗಳನ್ನು ನಿರ್ಮಿಸಿದಾಗ ಮಾತ್ರ ಟೀಕಿಸುವುದು ವಿಪರ್ಯಾಸಕರ ಎಂದು ಅವರು ಹೇಳಿದ್ದಾರೆ.
ಭಾರತಕ್ಕೆ ಪ್ರವಾಸ ಬರುವಾಗಲೇ ಸ್ಪಿನ್ ಬೌಲಿಂಗ್ಗೆ ಆಡಲು ತಯಾರಾಗಿಯೇ ಬರಬೇಕು ಎಂದು ಅವರು ಹೇಳಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಕೂಡ ಅದೇ ರೀತಿಯ ಸ್ಪಿನ್ ಪಿಚ್ ತಯಾರಿಸುವಂತೆ ಅವರು ಭಾರತಕ್ಕೆ ಕರೆ ನೀಡಿದ್ದಾರೆ.
ಆಸ್ಟ್ರೇಲಿಯಾದ ಸ್ಪಿನ್ನರ್ ಲಿಯೋನ್ ಕೂಡ ಸ್ಪಿನ್ ಪಿಚ್ಗಳನ್ನು ಕೆಲವು ಕ್ರಿಕೆಟಿಗರು ಟೀಕಿಸುವುದು ತರವಲ್ಲ ಎಂದು ಹೇಳಿದ್ದಾರೆ.