ಬಲಗೈಲಿ ನೋವಿದ್ರೆ ಎಡಗೈಗೆ ಆಪರೇಷನ್‌! ಡಾಕ್ಟರ್‌ ಎಡವಟ್ಟಿಗೆ ಪೋಷಕರು ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಪಂಢರಪುರದಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಗಂಭೀರ ಆರೋಪೊಂದು ಕೇಳಿಬಂದಿದ್ದು, ಬಾಲಕನ ಬಲಗೈಗೆ ಮಾಡಬೇಕಿದ್ದ ಶಸ್ತ್ರಚಿಕಿತ್ಸೆಯನ್ನು ವೈದ್ಯರು ತಪ್ಪಾಗಿ ಎಡಗೈಗೆ ನಡೆಸಿದ ಘಟನೆ ನಡೆದಿದೆ. ಈ ವೇಳೆ ತಪ್ಪು ಬೆರಳನ್ನು ತೆಗೆದುಹಾಕಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಮಾಹಿತಿಯ ಪ್ರಕಾರ, ಬಾಲಕನು ಪೋಸ್ಟಾಕ್ಸಿಯಲ್ ಪಾಲಿಡಾಕ್ಟಿಲಿ ಸಮಸ್ಯೆಯಿಂದ ಬಳಲುತ್ತಿದ್ದು, ಎರಡೂ ಕೈಗಳಲ್ಲಿ ಹೆಚ್ಚುವರಿ ಕಿರುಬೆರಳುಗಳಿದ್ದವು. ಆದರೆ ಬಲಗೈಯೊಂದರಲ್ಲಿ ಮಾತ್ರ ನೋವು ಮತ್ತು ಬಿಗಿತ ಹೆಚ್ಚಾಗಿ ಕಂಡುಬಂದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ಸಲಹೆ ನೀಡಿದ್ದರು. ಅದರಂತೆ ಕುಟುಂಬವು ಮಗುವನ್ನು … Continue reading ಬಲಗೈಲಿ ನೋವಿದ್ರೆ ಎಡಗೈಗೆ ಆಪರೇಷನ್‌! ಡಾಕ್ಟರ್‌ ಎಡವಟ್ಟಿಗೆ ಪೋಷಕರು ಗರಂ