ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿರುವ ವಿಕೆಟ್ ಕೀಪರ್ ಎಡಗೈ ಬ್ಯಾಟ್ಸ್ಮನ್ ರಿಷಭ್ ಪಂತ್ ಇದೀಗ ಟೀಂ ಇಂಡಿಯಾ ಬಯೋಬಬಲ್ಗೆ ವಾಪಾಸಾಗಿದ್ದಾರೆ.
ಈ ಬಗ್ಗೆ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಪೇಜ್ನಲ್ಲಿ ಮಾಹಿತಿ ನೀಡಿದ್ದುಮ ವೆಲ್ಕಮ್ ಬ್ಯಾಕ್ ಎಂದು ಹೇಳಿದ್ದಾರೆ.
Hello @RishabhPant17, great to have you back 😀#TeamIndia pic.twitter.com/aHYcRfhsLy
— BCCI (@BCCI) July 21, 2021
ಬ್ರಿಟನ್ ಮಾರ್ಗಸೂಚಿಗಳ ಪ್ರಕಾರ 10 ದಿನ ಪ್ರತ್ಯೇಕ ವಾಸದಲ್ಲಿದ್ದ ಪಂತ್ ಸೋಮವಾರ ಪರೀಕ್ಷೆಗೆ ಒಳಪಟ್ಟಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಂತರದ ವಿಶ್ರಾಂತಿ ಅವಧಿಯಲ್ಲಿ ರಿಷಭ್ಗೆ ಸೋಂಕು ತಗುಲಿತ್ತು.