ವಿಶ್ವಸಂಸ್ಥೆಯಲ್ಲಿ ಕನ್ನಡದ ಕಹಳೆ ಊದಲು ರಿಷಬ್‌ ಸಜ್ಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ದೇಶದ ಜನತೆಗೆ ಕಲೆ ಆಚಾರ ವಿಚಾರಗಳನ್ನು ಸಿನೆಮಾ ಮೂಲಕ ಪರಿಚಯಿಸಿ ಖ್ಯಾತಿ ಪಡೆದ
ಕಾಂತಾರ ಸಿನಿಮಾದ ನಟ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ ಅವರು ವಿಶ್ವಸಂಸ್ಥೆಯಲ್ಲಿ ಕಾಡಿನ ಜನರು ಮತ್ತು ಸಂಸ್ಕೃತಿಯ ಬಗ್ಗೆ ಮಾತನಾಡಲು ಸಜ್ಜಾಗಿದ್ದಾರೆ.

ನಾಡಿನ ಸಂಸ್ಕೃತಿ, ಆಚರಣೆ, ಆಚಾರ- ವಿಚಾರವನ್ನು ಸಿನಿಮಾ ಮೂಲಕ ತೋರಿಸುತ್ತಿರುವ ರಿಷಬ್‌ ಶೆಟ್ಟಿ ಇದೀಗ ಕಾಡಿನ ಸಂಸ್ಕೃತಿ ಬಗ್ಗೆ ಮಾತನಾಡಲು ವಿಶ್ವಸಂಸ್ಥೆಗೆ ಹೊರಟು ನಿಂತಿರುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ.

ಜಾಗತಿಕ ಸಮಸ್ಯೆಗಳನ್ನು ವಿಶ್ವಸಂಸ್ಥೆ ತನ್ನ ವಾರ್ಷಿಕ ಸಭೆಯಲ್ಲಿ ಚರ್ಚಿಸುತ್ತಿದೆ. ವಿಶ್ವದ ಹತ್ತು ಹಲವು ದೇಶಗಳ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಮಸ್ಯೆಗಳ ಬಗ್ಗೆ ಅಲ್ಲಿ ಕೂಲಂಕುಶವಾಗಿ ಚರ್ಚಿಸಲಾಗುತ್ತದೆ. ಈ ಭಾರಿ ಕರ್ನಾಟಕದಿಂದ ಕಾಂತಾರ ಚಿತ್ರದ ನಿರ್ದೇಶಕ ಮತ್ತು ನಟ ರಿಷಬ್‌ ಶೆಟ್ಟಿ ಸಹ ಈ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿಶೇಷ ಏನೆಂದರೆ ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿಯೇ ಸಮಸ್ಯೆಯ ಅರಿವು ಮೂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!