ರಿಷಬ್ ಪಂತ್ ಆರೋಗ್ಯ ಸ್ಥಿತಿ ಈಗ ಹೇಗಿದೆ? ಮಹತ್ವದ ಅಪ್​ಡೇಟ್ ನೀಡಿದ ಡಿಡಿಸಿಎ ಕಾರ್ಯದರ್ಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಅಪಘಾತಕ್ಕೀಡಾಗಿರುವ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ರಿಷಬ್ ಸದ್ಯದ ಸ್ಥಿತಿಯ ಬಗ್ಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಸಿದ್ಧಾರ್ಥ್ ಸಾಹಿಬ್ ಸಿಂಗ್ ಮಹತ್ವದ ಅಪ್‌ ಡೇಟ್‌ ನೀಡಿದ್ದಾರೆ.  ರೂರ್ಕಿಯಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ವೇಳೆ ಬಿಎಂಡಬ್ಲ್ಯು ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು
25 ವರ್ಷದ ಪಂತ್‌ ಗಂಭೀರವಾಗಿ ಗಾಯಗೊಂಡಿದ್ದರು. ʼ ನಾವೆಲ್ಲರೂ ಚಿಂತಿತರಾಗಿದ್ದೇವೆ ಆದರೆ ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಪಂತ್ ತಲೆ, ಬೆನ್ನು ಮತ್ತು ಪಾದಗಳಿಗೆ ಗಾಯಗಳಾಗಿದೆ’. ಅವರ ಆರೋಗ್ಯದ ಬಗ್ಗೆ ಡಿಡಿಸಿಎ ನಿಗಾ ಇರಿಸಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥೀಸುತ್ತಿದ್ದೇವೆ” ಎಂದು ಡಿಡಿಸಿಎ ಕಾರ್ಯದರ್ಶಿ ಸಿದ್ಧಾರ್ಥ್ ಸಾಹಿಬ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಪಂತ್‌ಗೆ ಚಿಕಿತ್ಸೆ ನೀಡಿದ ಡಾ ಸುಶೀಲ್ ನಗರ್, ಪಂತ್‌ ಗೆ ಹಣೆ ಮತ್ತು ಮೊಣಕಾಲಿನ ಮೇಲೆ ಗಾಯಗಳಾಗಿವೆ. ” ಯಾವುದೇ ಮೂಳೆ ಮುರಿತವಿಲ್ಲ ಮೊದಲ ಎಕ್ಸ್-ರೇಗಳು ಸೂಚಿಸಿವೆ. ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರೂ ಪಂತ್ ಅವರ ದೇಹದಲ್ಲಿ ಯಾವುದೇ ಸುಟ್ಟಗಾಯಗಳಿಲ್ಲ ಎಂದು ಹೇಳಿದ್ದಾರೆ. ‘ಪಂತ್ ಅವರ ಹಣೆಯ ಮೇಲೆ ಎರಡು ಸೀಳು ಗಾಯಗಳಾಗಿವೆ. ಅವರ ಬೆನ್ನಿನ ಚರ್ಮ ಕಿತ್ತುಹೋಗಿದೆ ಎಂದು ವೈದ್ಯರು ಹೇಳಿದ್ದಾರೆ.
ಪಂತ್ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ತಮ್ಮ ಸರ್ಕಾರ ಭರಿಸಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಪಂತ್ ಫೆಬ್ರವರಿಯ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಮುಂಚಿತವಾಗಿ ಶಕ್ತಿ ಮತ್ತು ಕಂಡೀಷನಿಂಗ್ ಕಾರ್ಯಕ್ರಮಕ್ಕಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಗೆ ಸೇರಬೇಕಿದ್ದ ಕಾರಣ ಜನವರಿ 3 ರಂದು ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧ ಮುಂಬರುವ ವೈಟ್-ಬಾಲ್ ಸರಣಿಯಿಂದ ಪಂತ್ ಹೊರಗುಳಿದಿದ್ದರು. ಪಂತ್ ಇದುವರೆಗೆ 33 ಟೆಸ್ಟ್‌ಗಳಲ್ಲಿ ಐದು ಶತಕ ಮತ್ತು 11 ಅರ್ಧಶತಕಗಳ ಸಹಾಯದಿಂದ 2,271 ರನ್ ಗಳಿಸಿದ್ದಾರೆ. ಅವರು 30 ಏಕದಿನ ಮತ್ತು 66 ಟಿ 20 ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!