Thursday, June 30, 2022

Latest Posts

ಕ್ರಿಕೆಟಿಗ ರಿಷಭ್ ಪಂತ್ ಇದೀಗ ಉತ್ತರಾಖಂಡದ ರಾಯಭಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟಿಗ ರಿಷಭ್ ಪಂತ್ ಅವರನ್ನು ಉತ್ತರಾಖಂಡದ ರಾಯಭಾರಿಯನ್ನಾಗಿ ನೇಮಿಸಲಾಗಿದೆ.
ಯುವಕರನ್ನು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವ ಅವಶ್ಯ ಇದ್ದು, ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ರಿಷಭ್ ಪಂತ್ ಅವರನ್ನು ನೇಮಿಸಲಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.

ಈ ಬಗ್ಗೆ ರಿಷಭ್ ಪಂತ್ ಟ್ವೀಟ್ ಮಾಡಿ ಹರ್ಷವ್ಯಕ್ತಪಡಿಸಿದ್ದು, ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕವಾಗಿರುವುದು ನನಗೆ ಹೆಮ್ಮೆಯ ವಿಷಯ ಎಂದಿದ್ದಾರೆ.
ಈ ಅವಕಾಶ ನೀಡಿದ್ದಕ್ಕೆ ಸಿಎಂ ಧಾಮಿ ಅವರಿಗೆ ಧನ್ಯವಾದಗಳು. ಆರೋಗ್ಯ ಹಾಗೂ ಕ್ರೀಡೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಾನು ಮಾಡುತ್ತೇನೆ. ಭಾರತ ಫಿಟ್ ಆಗಿರಲಿ ಎಂದು ನೀವು ತೆಗೆದುಕೊಳ್ಳುತ್ತಿರುವ ಈ ನಿರ್ಧಾರಗಳು ನಮಗೆಲ್ಲ ಖುಷಿ ನೀಡಿದೆ ಎಂದಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss