Wednesday, November 29, 2023

Latest Posts

ಬಾಲಿವುಡ್ ನಟ ಅನುಪಮ್ ಖೇರ್ ಜೊತೆ ರಿಷಬ್ ಶೆಟ್ಟಿ: ಇಬ್ಬರ ಖುಷಿಗೆ ಫಿದಾ ಆದ ಅಭಿಮಾನಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಾಂತಾರ ನಟ ರಿಷಬ್ ಶೆಟ್ಟಿ ಸಿನಿಮಾ ಸಕ್ಸಸ್ ಆದ ಬೆನ್ನಲ್ಲೇ ಸಖತ್ ಬ್ಯುಸಿ ಆಗಿದ್ದು, ಎಲ್ಲೆಡೆ ಸಂಚಾರ ಮಾಡುತ್ತಿದ್ದಾರೆ.

ಎಲ್ಲೆಡೆ ಸಿನಿಮಾದದಿಂದಲೂ ಕೂಡ ರಿಷಬ್ ಶೆಟ್ಟಿ ಬೇಡಿಕೆ ಹೆಚ್ಚಾಗಿದ್ದು, ಅಭಿಮಾನಿ ಬಳಗ ದೊಡ್ಡದಾಗುತ್ತಿದೆ. ಹಿಂದಿಯ ಅನೇಕ ಕಾರ್ಯಕ್ರಮಗಳಿಗೆ ರಿಷಬ್ ಶೆಟ್ಟಿಗೆ ಆಹ್ವಾನ ಬರುತ್ತಿದೆ . ಅಲ್ಲಿ ಬಾಲಿವುಡ್ ಖ್ಯಾತ ನಟ ಮತ್ತು ನಿರ್ದೇಶಕರನ್ನು ಭೇಟಿಯಾಗಿದ್ದಾರೆ.

ಇದೇ ರೀತಿ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಅವರು ಕೂಡ ರಿಷಬ್ ಶೆಟ್ಟಿ ಅವರನ್ನು ಭೇಟಿಯಾಗಿದ್ದು, ಟ್ವಿಟರ್ ನಲ್ಲಿ ಫೋಟೋ ಶೇರ್ ಮಾಡಿದ್ದಾರೆ.

‘ಒಂದು ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡೆವು. ಕೆಲವು ನಿಮಿಷ ಅವರ ಜೊತೆ ಸಮಯ ಕಳೆದೆ ಎಂದುಹೇಳಿದ್ದು, ಅನುಪಮ್ ಶೇರ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ ಕೂಡ ಅನುಪಮ್ ಖೇರ್ ಅವರನ್ನು ಹಾಡಿ ಹೊಗಳಿದ್ದಾರೆ. ಎಲ್ಲರನ್ನೂ ನಗಿಸುವ ಅದ್ಭುತ ಮನುಷ್ಯ. ನಿಮ್ಮೊಂದಿಗೆ ಕಳೆದ ಸಂಜೆ ಅದ್ಭುತವಾಗಿತ್ತು’ ಎಂದು ಹೇಳಿದ್ದಾರೆ.

 

ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರನ್ನು ಭೇಟಿಯಾಗಿದ್ದು ಮಾತ್ರವಲ್ಲ, ಮತ್ತೋರ್ವ ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಅವರನ್ನು ಭೇಟಿಯಾಗಿ ಸಂತಸ ಪಟ್ಟಿದ್ದಾರೆ. ರಿಷಬ್ ಶೆಟ್ಟಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಗ್ಗೆ ಮಧುರ್ ಭಂಡಾರ್ಕರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ರಿಷಬ್ ಶೆಟ್ಟಿ ಜೊತೆ ಇರುವ ಫೋಟೋ ಶೇರ್ ಮಾಡಿ, ‘ಅತ್ಯಂತ ಸರಳ ಮತ್ತು ವಿನಮ್ರ ವ್ಯಕ್ತಿ ರಿಷಬ್ ಶೆಟ್ಟಿ ಜೊತೆ ಇಂದು ದೆಹಲಿಯಲ್ಲಿ ಸಂವಾದ. ಡಿವೈನ್ ಬ್ಲಾಕ್ ಬಸ್ಟರ್ ಕಾಂತಾರ ಸಿನಿಮಾದ ನಿರ್ದೇಶನ ಮತ್ತು ಅವರ ನಟನೆ ಅದ್ಭುತ’ ಎಂದು ಬರೆದುಕೊಂಡಿದ್ದಾರೆ.

ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದ್ದು ಕೋಟಿ ಕೋಟಿ ಬಾಚಿಕೊಂಡಿದೆ. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಕಲಾವಿದರು ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!