ಗುಜರಾತ್ ಚುನಾವಣೆಯಲ್ಲಿ ರಿವಾಬಾ ಜಡೇಜಾ ಸ್ಪರ್ಧೆ: ಪತ್ನಿಯ ಪರ ಬಿರುಸಿನ ಪ್ರಚಾರಕ್ಕಿಳಿದ ಜಡ್ಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಗುಜರಾತ್ ವಿಧಾನಸಭೆ ಚುನಾವಣಾ ಕಣವು ದಿನೇ ದಿನೇ ರಂಗೇರುತ್ತಿದ್ದು, ಮತ್ತೆ ಅಧಿಕಾರಕ್ಕಾಗಿ ಬಿಜೆಪಿ ರಣತಂತ್ರ ರೂಪಿಸುತ್ತಿದ್ದು, ಇತ್ತ ಕಾಂಗ್ರೆಸ್ ಹಾಗೂ ಆಪ್ ಅದಿಕಾರಕ್ಕೇರಲು ಸಿದ್ಧತೆ ನಡೆಸುತ್ತಿದೆ.

ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಜಾಮ್‌ನಗರ ಉತ್ತರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿದ್ದಾರೆ. ಪತ್ನಿಯ ಗೆಲುವಿಗಾಗಿ ವೀಂದ್ರ ಜಡೇಜಾ ಪ್ರಚಾರಕ್ಕಿಳಿದಿದ್ದಾರೆ.

ಪ್ರಸ್ತುತ ಕ್ರಿಕೆಟ್‌ನಿಂದ ದೂರವಿರುವ ರವೀಂದ್ರ ಜಡೇಜಾ ರಿವಾಬಾ ಸಿಂಗ್ ಪರ ಪ್ರಚಾರಕ್ಕಿಳಿದಿದ್ದು, ಸೋಶಿಯಲ್ ಮೀಡಿಯಾದಲ್ಲೂ ಪತ್ನಿಗಾಗಿ ಪ್ರಚಾರ ನಡೆಸುತ್ತಿರುವ ಜಡೇಜಾ ಪತ್ನಿಗಾಗಿ ಹೊಸ ಟ್ವಿಟರ್‌ ಅಕೌಂಟ್ ತೆರೆದಿದ್ದಾರೆ.

ಹೊಸ ಟ್ವಿಟರ್‌ ಅಕೌಂಟ್ ಬಗ್ಗೆ ಮಾತನಾಡಿರುವ ಜಡೇಜಾ, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ನನ್ನ ಪತ್ನಿ ರಿವಾಬಾ ಜಡೇಜಾ ಅವರು ಇಂದು ಹೊಸದಾಗಿ ಟ್ವಿಟರ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಜನರಿಗಾಗಿ ಕೆಲಸ ಮಾಡಲು ತಮ್ಮ ಪತ್ನಿ , ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗವನ್ನು ಅನುಸರಿಸಲು ಬಯಸುತ್ತಾರೆ. ಇದು ರಿವಾಬಾ ಅವರ ಮೊದಲ ಪ್ರಯತ್ನ. ಈ ಪ್ರಯತ್ನದಲ್ಲಿ ಅವರು ಪ್ರಗತಿ ಹೊಂದುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಮಡದಿ ಸಹಾಯ ಮಾಡುವ ಸ್ವಭಾವದವಳು, ಯಾವಾಗಲೂ ಜನರಿಗೆ ಸಹಾಯ ಮಾಡಲು ಬಯಸುತ್ತಾಳೆ. ಆದ್ದರಿಂದ ರಾಜಕೀಯಕ್ಕೆ ಬರುವ ನಿರ್ಧಾರ ಮಾಡಿದ್ದಾಳೆ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ವಿಜಯಭಾಯ್ ರೂಪಾನಿ ಅವರ ವಿಶೇಷ ಉಪಸ್ಥಿತಿಯಲ್ಲಿ ರಿವಾಬಾ ಜಡೇಜಾ ಜಾಮ್‌ನಗರ ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!