ಗಡಿಯಲ್ಲಿ ಮತ್ತೆ ಪಾಕ್‌ ಡ್ರೋನ್ ಹಾರಾಟ: ಭಾರತೀಯ ಸೇನೆ ಅಲರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗಡಿಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಆಕ್ರಮಣಕಾರಿ ಕೃತ್ಯ ಎಸಗಿದೆ. ಜಮ್ಮು ಮತ್ತು ಕಾಶ್ಮೀರದ ಕನಾಚಕ್ ಸೆಕ್ಟರ್‌ನ ಅಂತರಾಷ್ಟ್ರೀಯ ಗಡಿಯ ಬಳಿಯ ವಾಯುಪ್ರದೇಶದಲ್ಲಿ  ಬಿಎಸ್‌ಎಫ್ ಸಿಬ್ಬಂದಿ ಡ್ರೋನ್ ಅನ್ನು ಗುರುತಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ರಾತ್ರಿ 9.40ಕ್ಕೆ ಆಕಾಶದಲ್ಲಿ ಡ್ರೋನ್‌ನ ಕೆಂಪು ಬೆಳಕು ಕಾಣಿಸಿಕೊಂಡ ಕೂಡಲೇ ಬಿಎಸ್ಎಫ್ ಸಿಬ್ಬಂದಿ ಡ್ರೋನ್ ಮೇಲೆ ಗುಂಡು ಹಾರಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಗುಂಡು ಹಾರಿಸುತ್ತಿದ್ದಂತೆ ಡ್ರೋನ್‌ ಹಿಂತಿರುಗಿದೆ. ಈ ಘಟನೆಯೊಂದಿಗೆ ಅಧಿಕಾರಿಗಳು ಕನಾಚಕ್ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ.  ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎನ್ನಲಾಗಿದೆ. ಪಾಪಿ ಪಾಕಿಸ್ತಾನವು ಡ್ರೋನ್‌ಗಳ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!