Friday, March 5, 2021

Latest Posts

ಆತ್ಮಹತ್ಯೆ ಮಾಡಿಕೊಂಡ ಸ್ನೇಹಿತನನ್ನು ನೋಡಲು ಹೊರಟಿದ್ದ ಬೈಕ್ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಹುಬ್ಬಳ್ಳಿಯ ಶೆರೆವಾಡ ಟೋಲ್ ಬಳಿಯ ಕುಂದಗೋಳ ರಸ್ತೆಯಲ್ಲಿ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಂಕರಪ್ಪ ಬಸಲಿಂಗಪ್ಪ ಅಂಗಡಿ, ಇಮ್ರಾನ್ ಉರುಫ್ ಇಸ್ಮಾಯಿಲ್ ಬಸೀರಬಾಬ್ ಹಾಗೂ ಮೈನುದ್ದೀನ್ ಬಾಷಾಸಾಬ್ ಮಿಶ್ರಕೋಟಿ ಮೃತರು.
ಕುಂದಗೋಳ ತಾಲೂಕಿನ ಬಿಳೇಬಾಲ ಗ್ರಾಮದಲ್ಲಿ ಸ್ನೇಹಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನನ್ನು ನೋಡಲು ಶಂಕರಪ್ಪ ಹಾಗೂ ಆತನ ಸ್ನೇಹಿತ ಹೊರಟಿದ್ದರು. ಇತ್ತ ಹುಬ್ಬಳ್ಳಿಯಿಂದ ಇಮ್ರಾನ್ ಬೈಕ್‌ನಲ್ಲಿ ಬರುತ್ತಿದ್ದ. ಇವೆರಡು ಗಾಡಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss