Wednesday, August 17, 2022

Latest Posts

ಸ್ಕೂಟಿ‌- ಟ್ರ್ಯಾಕ್ಟರ್ ನಡುವೆ ಅಪಘಾತ: ಮಹಿಳೆ ಸಾವು

ಹೊಸದಿಗಂತ ವರದಿ, ಕುಶಾಲನಗರ:
ಸ್ಕೂಟಿ‌ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ.
ಜಿಲ್ಲೆಯ ಮಾದಾಪಟ್ಟಣ ನಿವಾಸಿ, ಕೆಇಬಿ ನಿವೃತ್ತ ನೌಕರ ಧನವೇಲು ಎಂಬವರು ಪತ್ನಿ ಪದ್ಮಾ (57) ಮೃತಪಟ್ಟಿದ್ದಾರೆ.
ದಂಪತಿಗಳಿಬ್ಬರು ಕುಶಾಲನಗರದಿಂದ ಮಾದಾಪಟ್ಟಣಕ್ಕೆ ತೆರಳುವಾಗ ತಾವರೆಕೆರೆ ಬಳಿ ಹೆದ್ದಾರಿಯಲ್ಲಿದ್ದ ಬೃಹತ್ ಗುಂಡಿ ತಪ್ಪಿಸಲು ಬದಿಗೆ ದ್ವಿಚಕ್ರ ವಾಹನ ತಿರುಗಿಸಿದ ಸಂದರ್ಭ ಹಿಂದಿನಿಂದ ಟ್ರ್ಯಾಕ್ಟರ್ ಡಿಕ್ಕಿಯಾಗಿದೆ. ರಸ್ತೆಗೆ ಉರುಳಿದ ಪದ್ಮಾ ಅವರ ತಲೆಗೆ ತೀವ್ರ ಘಾಸಿ‌‌ ಉಂಟಾಗಿ‌ ಮೃತಪಟ್ಟರೆ ಪತಿ ಧನವೇಲು‌ ಕೈ ಮುರಿದು ಗಂಭೀರವಾಗಿ ಗಾಯಗೊಂಡಿದ್ದಾರೆ‌.
ಹೆದ್ದಾರಿಯಲ್ಲಿ‌‌‌ ಅಲ್ಲಲ್ಲಿ ಬೃಹತ್ ಅಪಾಯಕಾರಿ ಗುಂಡಿಗಳಿದ್ದು ಪ್ರಾಣಕ್ಕೆ ಸಂಚಾರ ಉಂಟಾಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!