ಬ್ಯಾಂಕ್‌ ಸಿಬ್ಬಂದಿಯನ್ನು ಶೌಚಾಲಯದಲ್ಲಿ ಕೂಡಿಹಾಕಿ ಕೆಜಿಗಟ್ಟಲೆ ಚಿನ್ನಾಭರಣ ದರೋಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ತಮಿಳುನಾಡಿನ ಚೆನ್ನೈನ ಬ್ಯಾಂಕ್‌ ಒಂದರ ಸಿಬ್ಬಂದಿಯನ್ನು ಶೌಚಾಲಯದಲ್ಲಿ ಕೂಡಿಹಾಕಿದ ಕಳ್ಳರು ಬ್ಯಾಂಕ್‌ ನಿಂದ ಹಲವು ಕೋಟಿ ಬೆಲೆಬಾಳುವ ಬರೋಬ್ಬರಿ ಮೂವತ್ತೆರಡು ಕೆಜಿ ಚಿನ್ನಾಭರಣವನ್ನು ಲೂಟಿ ಮಾಡಿದ್ದಾರೆ.
ನಗರದ ಅರುಂಬಕ್ಕಂ ಪ್ರದೇಶದಲ್ಲಿ ಫೆಡ್‌ಬ್ಯಾಂಕ್ ಗೋಲ್ಡ್‌ ಲೋನ್‌ ಶಾಖೆಗೆ ನುಗ್ಗಿದ ಮುಖವಾಡ ಧರಿಸಿದ ದರೋಡೆಕೋರರು ಅಲ್ಲಿನ ಮೂವರು ಉದ್ಯೋಗಿಗಳನ್ನು ಶೌಚಾಲಯದಲ್ಲಿ ಕೂಡಿಹಾಕಿದ್ದಾರೆ. ಆ ಬಳಿಕ ಚಿನ್ನ ಪೇರಿಸಿಟ್ಟಿದ ಸ್ಟ್ರಾಂಗ್ ರೂಮ್‌ನ ಕೀಗಳನ್ನು ತೆಗೆದುಕೊಂಡು ಅಲ್ಲಿದ್ದ 32 ಕೆಜಿ ಚಿನ್ನವನ್ನು ಬ್ಯಾಗ್‌ ನೊಳಕ್ಕೆ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ದರೋಡೆಕೋರರಿಗೆ ಬ್ಯಾಂಕ್‌ ನ ಉದ್ಯೋಗಿಯೊಬ್ಬ ಸಹಕಾರ ನೀಡಿರುವ ಬಗ್ಗೆ ಶಂಕಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಟಿಎಸ್ ಅನ್ಬು ತಿಳಿಸಿದ್ದಾರೆ.
“ಬ್ಯಾಂಕ್‌ ಗೆ ಆಗಮಿಸಿದ ವ್ಯಕ್ತಿಗಳು ನನಗೆ ನೀಡಿದ ತಂಪು ಪಾನೀಯವನ್ನು ಸೇವಿಸಿದ ನಂತರ ನಾನು ಪ್ರಜ್ಞಾಹೀನನಾದೆʼ ಎಂದು ಬ್ಯಾಂಕ್‌ ನ ಸೆಕ್ಯೂರಿಟಿ ಗಾರ್ಡ್‌ ಹೇಳಿದ್ದಾನೆ. ಅವರಲ್ಲಿ ಒಬ್ಬಾತ ಉದ್ಯೋಗಿಯಾಗಿದ್ದರಿಂದ ನಾನು ಅವರನ್ನು ಅನುಮಾನಿಸಲಿಲ್ಲʼ ಎಂದು ಆತ ಹೇಳಿದ್ದಾನೆ. ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!