ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………
ಹೊಸ ದಿಗಂತ ವರದಿ, ಮೈಸೂರು:
ನಗರದ ಚಾಮುಂಡಿ ವನದ ಸಮೀಪ ಇರುವ ಅಮೃತ್ ಗೋಲ್ಡ್ ಪ್ಯಾಲೇಸ್ ನಲ್ಲಿ ಸೋಮವಾರ ನಡೆದ ಅಮೃತ್ ಗೋಲ್ಡ್ ಅಂಡ್
ಸಿಲ್ವರ್ ಅಂಗಡಿಯ ದರೋಡೆ, ಹಾಗೂ ಅಮಾಯಕನ ಹತ್ಯೆ ಘಟನೆಯ ಸ್ಥಳಕ್ಕೆ ಶಾಸಕ ಎಸ್.ಎ.ರಾಮದಾಸ್ ಮಂಗಳವಾರ
ಪೋಲಿಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಮೃತರ ತಂದೆ ರಂಗ ಸ್ವಾಮಿ ಅವರಿಗೆ ಪರಿಹಾರದ ರೂಪದಲ್ಲಿ 5 ಲಕ್ಷ ರೂ ಗಳನ್ನು ನೀಡಲು ಮುಖ್ಯಮಂತ್ರಿಗಳು ಒಪ್ಪಿರುತ್ತಾರೆ. ತಕ್ಷಣವೇ ಅವರ ಕುಟುಂಬಕ್ಕೆ ಪರಿಹಾರ ತಲುಪಿಸಲಾಗುವುದು ಎಂದು ಹೇಳಿದರು.
ಈ ಘಟನೆಯಿಂದ ಜನರಲ್ಲಿ ಭಯದ ವಾತಾವರಣ ಮೂಡಿರುವುದು ಸಹಜ. ಈ ದೃಷ್ಟಿಯಲ್ಲಿ ಕೆ.ಆರ್ ವ್ಯಾಪ್ತಿಗೆ ಬರುವ ಎಲ್ಲಾ ಠಾಣೆಯ ಮುಖ್ಯಸ್ಥರನ್ನು ಕರೆದು, ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ರಹಿತವಾಗಿ ಮಾಡಲು, ಕಳೆದ 6 ತಿಂಗಳಿoದ ಕೆಲಸ
ನಿರ್ವಹಿಸುತ್ತಿದ್ದೇವೆ. ಆದರೂ ಈ ಅಹಿತಕರ ಘಟನೆ ನಡೆದಿರುವುದು ದುಃಖಕರ. ಜನರ ಹಿತದೃಷ್ಟಿಯಿಂದ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಠಾಣಾ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ವ್ಯಾಪಾರ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೂ ಕರೆದು ಧೈರ್ಯ ತುಂಬಲಾಗುವುದು ಎಂದು ತಿಳಿಸಿದರು.
ಈ ಘಟನೆಗೆ ಸಂಬoಧಿಸಿದoತೆ ಕೂಡಲೇ ಅಪರಾಧಿಗಳನ್ನ ಬಂಧಿಸುವಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದ್ದೇನೆ ಎಂದರು.