Saturday, July 2, 2022

Latest Posts

ಅಮೆಜಾನ್ ಪ್ರೈಮ್ ಗೆ ಎಂಟ್ರಿ ಕೊಟ್ಟ ‘ರಾಬರ್ಟ್’!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಮಾಡುತ್ತಿದ್ದಾರೆ.
ಶಿವರಾತ್ರಿ ದಿನದಂದು ಬಿಡುಗಡೆಯಾಗಿದ್ದ ರಾಬರ್ಟ್ ಸಿನಿಮಾ ಈಗಾಗಲೇ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ, ಇದೇ ತಿಂಗಳು ಏಪ್ರಿಲ್ 25ಕ್ಕೆ ಈ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದೆ.
ತರುಣ್ ಸುಧೀರ್ ನಿರ್ದೇಶನದ, ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಈ ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿ ಅಭಿನಯಿಸಿದ್ದು , ವಿನೋದ್ ಪ್ರಭಾಕರ್, ಸೋನಾಲ್ ಮೊಂಥೈರೋ, ರವಿಶಂಕರ್, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ರವಿಕಿಶನ್, ದೇವರಾಜ್, ಅವಿನಾಶ್, ಸೇರಿದಂತೆ ಮೊದಲಾದ ಕಲಾವಿದರು ಅಭಿನಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss