Sunday, August 14, 2022

Latest Posts

ರಾಬರ್ಟ್ ಚಿತ್ರ ಪೈರಸಿಗೆ ಯತ್ನ: ಓರ್ವ ಅರೆಸ್ಟ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಬರ್ಟ್ ಚಿತ್ರವನ್ನು ಪೈರಸಿ ಮಾಡಲು ಯತ್ನಿಸಿದ ವ್ಯಕ್ತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಬೆಂಗಳೂರಿನ ಸಿದ್ಧೇಶ್ವರ ಥಿಯೇಟರ್​​​ನಲ್ಲಿ ಸಿನಿಮಾ ರೆಕಾರ್ಡ್ ಮಾಡುವಾಗ ಆರೋಪಿ ಮಧು ಸಿಕ್ಕಿ ಬಿದ್ದಿದ್ದು, ಸತತ ಮೂರು ದಿನಗಳಿಂದ ಥಿಯೇಟರ್​ಗೆ ಬರುತ್ತಿದ್ದ ಮಧುವನ್ನು ಗಮಿನಿಸಿರುವ ಥಿಯೇಟರ್​​ ಮಾಲೀಕ ಹಾಗೂ ಸಿಬ್ಬಂದಿ, ಅನುಮಾನದ ಮೇಲೆ ಈತನ ಬಗ್ಗೆ ಚಿತ್ರತಂಡಕ್ಕೆ ಮಾಹಿತಿ ನೀಡಿದ್ದಾರೆ.
ರೆಕಾರ್ಡ್ ಮಾಡುವಾಗ ಚಿತ್ರ ತಂಡದವರು ಮಧುವನ್ನು ಹಿಡಿದಿದ್ದಾರೆ. ಸದ್ಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮಧುವನ್ನು ಬಂಧಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss