ಪಂಜಾಬ್‌ ಪೋಲೀಸ್‌ ಗುಪ್ತಚರ ಕೇಂದ್ರದ ಮೇಲೆ ರಾಕೆಟ್‌ ಗ್ರೆನೇಡ್ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಜಾಬ್‌ ಪೋಲೀಸ್‌ ಗುಪ್ತಚರ ಕೇಂದ್ರದ ಮೇಲೆ ರಾಕೆಟ್‌ ಚಾಲಿತ್‌ ಗ್ರೆನೇಡ್‌ ದಾಳಿ ನಡೆಸಲಾಗಿದೆ. ಮೊಹಾಲಿ ಯಲ್ಲಿರುವ ಪೋಲೀಸ್‌ ಗುಪ್ತಚರ ವಿಭಾಗದ ಕಛೇರಿಯ ಮೆಲೆ ಸೋಮವಾರ ರಾತ್ರಿ ದಾಳಿ ನಡೆದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.

ರಾತ್ರಿ 7.45ರ ಸುಮಾರಿಗೆ ಮುಖ್ಯದ್ವಾರದ ಹೊರಗಿಂದ ಅಪರಿಚಿತ ಕಾರಿನಲ್ಲಿದ್ದ ವ್ಯಕ್ತಿಗಳು ಏಕಾಏಕಿ ಆರ್‌ಪಿಜಿ ದಾಳಿ ಯಿಂದ ದಾಳಿ ನಡೆಸಿ ತಕ್ಷಣವೇ ಪರಾರಿಯಾಗಿದ್ದಾರೆ. ಗ್ರೆನೇಡ್‌ ಸ್ಫೋಟಿಸಿದ ಮರುಕ್ಷಣವೇ ಪರಾರಿಯಾಗುತ್ತಿದ್ದ ಕಾರನ್ನು ಗುರುತಿಸಲಾಗಿದೆ ಎಂದು ಪೋಲೀಸ್‌ ಮೂಲಗಳು ಹೇಳಿವೆ ಎಂದು ವರದಿಯಾಗಿದೆ.

ದಾಳಿ ನಡೆಸಿದವರು ಯಾರು ಎಂಬ ಕುರಿತು ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಪೋಲೀಸರು ಬಿರುಸಿನ ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೋಲೀಸ್‌ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪಂಜಾಬ್ ನಲ್ಲಿ ಇತ್ತಿಚಿಗೆ ಹಲವು ಶಂಕಿತ ಭಯೋತ್ಪಾದಕರನ್ನು ಹಾಗೂ ನಿಷೇದೀತ ಸಂಘಟನೆಯೊಂದಿಗೆ ನಂಟು ಹೊಂದಿರುವ ಹಲವರನ್ನು ಬಂಧಿಸಲಾಗಿತ್ತು. ಅಲ್ಲದೇ ಪಾಕಿಸ್ಥಾನದಿಂದ ಶಸ್ತ್ರಾಸ್ತ್ರ ಹಾಗೂ ಮಾದಕ ದ್ರವ್ಯ ಸಾಗಿಸುತ್ತಿದ್ದ ಡ್ರೋನ್‌ ಗಳನ್ನು ಹೊಡೆದುರುಳಿಸಲಾಗಿತ್ತು. ಇದರ ಬೆನ್ನಲ್ಲೇ ಪೋಲೀಸ್‌ ಗುಪ್ತಚರ ಕಛೇರಿಯ ಮೇಲೆ ದಾಳಿಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮೊಹಾಲಿಯ ಎಲ್ಲಾ ಪ್ರದೇಶಗಳಲ್ಲಿ ಕಟ್ಟೆಚ್ಚರ ಕೈಗೊಳ್ಳಲಾಗಿದ್ದು ಪಂಜಾಬ್‌ ಪೋಲೀಸ್‌ ಕಮಾಂಡೊಗಳನ್ನು ಗುಪ್ತಚರ ಕಚೇರಿಯ ಬಳಿ ನಿಯೋಜಿಸಲಾಗಿದೆ. ಹಲವು ಪೋಲೀಸ್‌ ಅಧಿಕಾರಿಗಳಿಗೆ ಹಲವೆಡೆ ಬಿಗಿ ಭದ್ರತೆ ಒದಗಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!